ಶಾಲೆಗೆ ಹೊಸ ಟಚ್, ಕೊಠಡಿಯಾಯ್ತು ಸೈನ್ಸ್ ರೂಂ, ಮಲ್ಟಿ ಟ್ಯಾಲೆಂಟೆಡ್ ವಿಜ್ಞಾನ ಶಿಕ್ಷಕನ ಕಮಾಲ್!
- ಕುಮಾರಸ್ವಾಮಿ- ಇವರು ಸಾಮಾನ್ಯ ಶಿಕ್ಷಕ ಅಲ್ಲ, ಮಲ್ಟಿ ಟ್ಯಾಲೆಂಟೆಡ್ ಟೀಚರ್!
- ಕೋವಿಡ್ ಲಾಕ್‍ಡೌನ್ ರಜಾ ಅವಧಿಯಲ್ಲಿ ಶಾಲಾ ಕಟ್ಟಡವನ್ನು ಅಂದಗಾಣಿಸಿರುವ ಶಿಕ್ಷಕ
- ವಿಜ್ಞಾನ ಶಿಕ್ಷಕರಾಗಿರೋದ್ರಿಂದ ಸದಾ ಹೊಸ ಪ್ರಯೋಗ ಮಾಡುವ ಕುಮಾರಸ್ವಾಮಿ
ಕೊಡಗು (ನ. 10): ಮಡಿಕೇರಿ ತಾಲೂಕಿನ ವಾಟೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕ (Science Teacher) ಕುಮಾರಸ್ವಾಮಿ ಸದಾ ಹೊಸ ಪ್ರಯೋಗ ಮಾಡುತ್ತಿರುತ್ತಾರೆ. ಮಕ್ಕಳಿಗೆ ಏನೇ ಪಾಠ ಮಾಡಿದ್ರೂ, ಅದನ್ನು ಪ್ರಯೋಗದ ರೂಪದಲ್ಲಿ ವಿವರಿಸ್ಬೇಕು ಅನ್ನೋದು ಇವರ ಹಠ. ಗ್ರಾಮೀಣ ಪ್ರದೇಶದಲ್ಲಿ ಜನ ಮೆಚ್ಚುವ, ವಿದ್ಯಾರ್ಥಿಗಳು ಇಷ್ಟಪಡುವ ಕಾರ್ಯ ಮಾಡಿ ಗಮನಸೆಳೆಯುತ್ತಿದ್ದಾರೆ.
NEET ಪರೀಕ್ಷೆಯಲ್ಲಿ ಪುತ್ತೂರಿನ ಸಿಂಚನಾ ಲಕ್ಷ್ಮೀ ಸಾಧನೆ, ರಾಘವೇಶ್ವರ ಶ್ರೀಗಳಿಂದ ಸನ್ಮಾನ
ಕೊರೊನಾ ಲಾಕ್ಡೌನ್ (Lockdown) ಸಮಯದಲ್ಲಿ ಸಿಕ್ಕ ರಜಾ ಅವಧಿಯಲ್ಲಿ ಶಾಲೆಯ ಅಂದ ಹೆಚ್ಚಿಸುವುದಕ್ಕೆ ಗೋಡೆಗಳ ಮೇಲೆ ಕಲರ್‌ಫುಲ್ ಆಗಿ ಚಿತ್ರ ಬಿಡಿಸಿದ್ದಾರೆ. ಸರ್ಕಾರದಿಂದ ಒಂದಷ್ಟು ಅನುದಾನ ಬಳಸಿಕೊಂಡಿದ್ದು ಬಿಟ್ಟರೆ, ಉಳಿದದ್ದೆಲ್ಲ ಇವರ ಸ್ವಂತ ಖರ್ಚಿನಲ್ಲೇ ಮಾಡಿಸಿದ್ದಾರೆ. ಈ ಶಾಲೆ ಮಾತ್ರವಲ್ಲ, ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಶಾಲೆಗಳಿಗೆ ಟ್ರೈನ್, ವಿಮಾನ, ಹೆಲಿಕಾಪ್ಟರ್ ಹೀಗೆ ಬೇರೆ ಬೇರೆ ಅತ್ಯಾಕರ್ಷಕ ಬಣ್ಣಗಳ ಮೂಲಕ ಹೊಸ ಟಚ್ ನೀಡಿದ್ದಾರೆ.