ಮಳೆ, ಪ್ರವಾಹದಲ್ಲಿಯೂ ರಾಜಕೀಯ ಕೆಸರೆರಚಾಟ

ವರುಣನ ಅಬ್ಬರಕ್ಕೆ ನಲುಗಿದ ಕೊಡಗು| ಪ್ರವಾಹ ಬರಲು ಕಾಂಗ್ರೆಸ್‌ ಕಾರಣ: ಬಿಜೆಪಿ ಸಂಸದ ಪ್ರತಾಪ್‌ ಸಿಂಹ|ನದಿಯಲ್ಲಿ ಹೂಳು ತೆಗೆಯಲು ಕಾಂಗ್ರೆಸ್‌ನವರಿಂದ ಅಡ್ಡಿ| ಕಾಂಗ್ರೆಸ್‌ನವರು ಈ ವಿಚಾರದಲ್ಲಿ ರಾಜಕಾರಣ ಮಾಡುವುದನ್ನ ಬಿಡಲಿ| ಕಾಂಗ್ರೆಸ್‌ನಿಂದಾಗಿ ಇಲ್ಲಿನ ಜನರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ|

First Published Aug 8, 2020, 3:33 PM IST | Last Updated Aug 8, 2020, 3:44 PM IST

ಮಡಿಕೇರಿ(ಆ.08): ವರುಣನ ಅಬ್ಬರಕ್ಕೆ ಕೊಡಗು ಜಿಲ್ಲೆ ಅಕ್ಷರಶಃ ನಲುಗಿ ಹೋಗಿದೆ. ಈ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಧಾವಿಸಬೇಕಾದ ಜನಪ್ರತಿನಿಧಿಗಳು ಮಾತ್ರ ರಾಜಕೀಯ ಕೆಸರೆರಚಾಟ ಮಾಡುತ್ತಿದ್ದಾರೆ. ಹೌದು, ಪ್ರವಾಹ ಬರಲು ಕಾಂಗ್ರೆಸ್‌ ಕಾರಣ ಎಂದು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಆರೋಪಿಸಿದ್ದಾರೆ. 

ಕಪಿಲಾ ನದಿಗೆ ನೀರು ಬಿಡುಗಡೆ: ನಾಳೆ ಮೈಸೂರು- ಊಟಿ ಹೆದ್ದಾರಿ ಬಂದ್ ಸಾಧ್ಯತೆ

ನದಿಯಲ್ಲಿ ಹೂಳು ತೆಗೆಯಲು ಕಾಂಗ್ರೆಸ್‌ನವರು ಅಡ್ಡಿ ಮಾಡಿದ್ದಾರೆ. ಕಾಂಗ್ರೆಸ್‌ನವರು ಈ ವಿಚಾರದಲ್ಲಿ ರಾಜಕಾರಣ ಮಾಡುವುದನ್ನ ಬಿಡಲಿ, ಕಾಂಗ್ರೆಸ್‌ನಿಂದಾಗಿ ಇಲ್ಲಿನ ಜನರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಎಂದು ಪ್ರತಾಪ್‌ ಸಿಂಹ ಅವರು ಆರೋಪಿಸಿದ್ದಾರೆ.