ಹಿಂದೂಗಳಿಗೆ ಅಲ್ಲಮಪ್ರಭು, ಮುಸ್ಲಿಮರಿಗೆ ಅಹಮದ್ ಶಾ ವಲಿ: ಸಾಮರಸ್ಯದ ಪ್ರತೀಕ ಬೀದರ್ ಅಷ್ಟೂರು ಜಾತ್ರೆ!

*ಹಿಂದೂ-ಮುಸ್ಲಿಂ ಭಾವೈಕ್ಯತೆಯ ಧಾರ್ಮಿಕ ಸಾಮರಸ್ಯದ ಸಂಕೇತ
*ಹಿಂದೂಗಳಿಗೆ ಅಲ್ಲಮಪ್ರಭು, ಮುಸ್ಲಿಮರಿಗೆ ಅಹಮದ್ ಶಾ ವಲಿ 
*ಬಹಮನಿ ಸುಲ್ತಾನರ ಕಾಲದಿಂದಲೂ ನಡೆಯುವ ಅಷ್ಟೂರು ಜಾತ್ರೆ 
*ಪ್ರತಿ ವರ್ಷ ಹೋಳಿ ಹಬ್ಬದ ನಂತರ ನಡೆಯುವ ಸಾಮರಸ್ಯದ ಜಾತ್ರೆ
*ಕುಸ್ತಿ ಸ್ಪರ್ಧೆ ಏರ್ಪಡಿಸುವುದು ಜಾತ್ರೆಯ ಪ್ರಮುಖ ಸಂಪ್ರದಾಯ

Share this Video
  • FB
  • Linkdin
  • Whatsapp

ಬೀದರ್ (ಮಾ. 02): ಒಂದೇ ದೇವರು ಎರಡು ಹೆಸರು, ಹಿಂದೂಳಿಗೆ ಅಲ್ಲಮಪ್ರಭುವಾದರೇ ಮುಸ್ಲಿಮರಿಗೆ ಅಹಮದ್ ಶಾ ವಲಿ. ಹೌದು ದೇವನೂಬ್ಬ ನಾಮ ಹಲವು' ಎಂಬಂತೆ ಬೀದರ್ ನಗರಕ್ಕೆ ಸಮೀಪದ ಅಷ್ಟೂರ ಗ್ರಾಮದ ಅಹ್ಮದ ಶಾ ಅಲಿ ವಲಿ ಬಹಮನಿ ದರ್ಗಾದ ಗುಂಬಜ್‌ಗಳು ಹಿಂದೂ ಹಾಗೂ ಮುಸ್ಲಿಂ ಸಹೋದರತ್ವ ಸಾರುವ ಪ್ರತೀಕಗಳಾಗಿವೆ. ಈ ದರ್ಗಾದಲ್ಲಿ ಮುಸ್ಲಿಮರಿಗೆ ಅಹ್ಮದ ಶಾ ಅಲಿ ವಲಿ ಆರಾಧ್ಯ ದೈವವಾದರೆ, ಹಿಂದುಗಳಿಗೆ ಅಲ್ಲಮಪ್ರಭುವಾಗಿ ಪೂಜೆ ಪಡೆಯುವುದು ವಿಶೇಷ. 

ಹಿಂದು ಮುಸ್ಲಿಂ ಭಾವೈಕ್ಯದಲ್ಲಿ ನಂಬಿಕೆಯಿಟ್ಟಿದ್ದ ಅಹ್ಮದ್ ಶಾ ಅಲಿ ಬಹಮನಿ ಅವರ ಜನ್ಮದಿನ ನಿಮಿತ್ತ ಗೋರಿಯ ಗುಂಬಜ್‌ಗೆ ತೆರಳುವ ಸಾವಿರಾರು ಜನರು ಭಕ್ತಿ ಸಮರ್ಪಣೆ ಮಾಡುವುದು ಹಲವು ಶತಮಾನಗಳಿಂದ ನಡೆದು ಬಂದಿದೆ. ಅಷ್ಟೂರಿನ ಅಲ್ಲಮಪ್ರಭು ದೇವರು ಜಗತ್ತಿಗೆ ಸಹೋದರತೆ, ಸಮಾನತೆಯೊಂದಿಗೆ ಸತ್ಯ ಶುದ್ಧ ಕಾಯಕ ಮತ್ತು ದಾಸೋಹದಂತಹ ಮಹಾನ್ ತತ್ವಗಳನ್ನು ಸಾರಿರುವ ಶರಣ. ಅವರ ಸ್ಮರಣೆಯಲ್ಲೇ ಪ್ರತಿವರ್ಷ ಜಾತ್ರೆ ನೆರವೇರುತ್ತದೆ.

ಇದನ್ನೂ ಓದಿ: ಕಾರಂಜಾ ಜಲಾಶಯ ಸೇರುತ್ತಿದೆ ಕೆಮಿಕಲ್ ಫ್ಯಾಕ್ಟರಿ ನೀರು, ಸಾರ್ವಜನಿಕರಿಗೆ ನರಕಯಾತನೆ 

ರಾಜ್ಯ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಿಂದ ಸಾವಿರಾರು ಯಾತ್ರಾರ್ಥಿಗಳು, ಪ್ರವಾಸಿಗರು ನಿತ್ಯ ಇಲ್ಲಿಗೆ ಆಗಮಿಸಿ ದರ್ಗಾಕ್ಕೆ ಹೂವಿನ ಚಾದರ್ ಸಮರ್ಪಿಸುತ್ತಾರೆ. ಅಗರಬತ್ತಿ ಹಚ್ಚಿ ಪೂಚಿಸಿ, ಪ್ರಾರ್ಥಿಸಿ ಅಹ್ಮದ್ ಶಾಹ್‌ಗೆ ನಮಿಸುತ್ತಾರೆ. ಇಲ್ಲಿ ಹಿಂದುಗಳು ಅಲ್ಲಮಪ್ರಭು ಗುಡಿ ಎಂದೂ, ಮುಸ್ಲಿಮರು ವಲಿ ದರ್ಗಾ ಎಂದೂ ಪರಿಗಣಿಸುವ ಅಹ್ಮದ್ ಶಾಹ್‌ನ ಸಮಾಧಿಯು ಅಪರೂಪದ ಭಾವೈಕ್ಯತೆಯ ತಾಣಗಳಲ್ಲೊಂದು. ಇಲ್ಲಿದೆ ಈ ಕುರಿತ ಒಂದು ವರದಿ. 

Related Video