Asianet Suvarna News Asianet Suvarna News

Bidar: ಕಾರಂಜಾ ಜಲಾಶಯ ಸೇರುತ್ತಿದೆ ಕೆಮಿಕಲ್ ಫ್ಯಾಕ್ಟರಿ ನೀರು, ಸಾರ್ವಜನಿಕರಿಗೆ ನರಕಯಾತನೆ

ಬೀದರ್ ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ಫ್ಯಾಕ್ಟರಿ ಜನರ ಪಾಲಿಗೆ ಕರಿನೆರಳಾಗಿ ಪರಿಣಮಿಸಿವೆ.ಆ ಕಾರ್ಖಾನೆಯಿಂದ ಹೊರ ಬಿಡುತ್ತಿರುವ ವಿಷಕಾರಿ ತ್ಯಾಜ್ಯದಿಂದ ಅಲ್ಲಿನ ಜನ ಚರ್ಮ ರೋಗಕ್ಕೆ ತುತ್ತಾಗ್ತಿದ್ದಾರೆ. ರೈತರು ನರಕಯಾತನೆ ಅನುಭವಿಸುವಂತಾಗಿದೆ,. 

ಬೀದರ್ (ಮಾ. 01): ಇಲ್ಲಿ ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ಫ್ಯಾಕ್ಟರಿ ಜನರ ಪಾಲಿಗೆ ಕರಿನೆರಳಾಗಿ ಪರಿಣಮಿಸಿವೆ. ಆ ಕಾರ್ಖಾನೆಯಿಂದ ಹೊರ ಬಿಡುತ್ತಿರುವ ವಿಷಕಾರಿ ತ್ಯಾಜ್ಯದಿಂದ ಅಲ್ಲಿನ ಜನ ಚರ್ಮ ರೋಗಕ್ಕೆ ತುತ್ತಾಗ್ತಿದ್ದಾರೆ,. ರೈತರು ನರಕಯಾತನೆ ಅನುಭವಿಸುವಂತಾಗಿದೆ,. ಕೆಮಿಕಲ್ ಪ್ಯಾಕ್ಟರಿ ಹಟಾವ್ ಜನತಾ ಕೊ ಬಚಾವ್ ಎಂದು ಬೀದಿಗಿಳಿದಿದ್ದಾರೆ ಅಲ್ಲಿನ ಜನರು,.

Ukraine Crisis: ತಾಯ್ನಾಡಿಗೆ ಬಂದು ಖುಷಿಯಾಗುತ್ತದೆ, ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದು ಹೀಗೆ

ಇಲ್ಲಿಯವರೆಗೂ ಪ್ರಾಣಿ, ಪಕ್ಷಿಗಳು, ಜಾನುವಾರುಗಳ ಸಾವಿಗಂತೂ ಲೆಕ್ಕವೇ ಇಲ್ಲ,. ಫಲವತ್ತಾಗಿ ಬೆಳೆಯುವ ಬೆಳೆಗಳು ಕೂಡ ಅಲ್ಲಿನ ಪ್ರದೇಶದಲ್ಲಿ ಕುಂಟಿತವಾಗ್ತಿವೆ,. ಅಂತಹ ದುಷ್ಪರಿಣಾಮ ಬೀರುವ ವಿಷಕಾರಿ ತ್ಯಾಜ್ಯ ಕಾರಂಜಾ ಜಲಾಶಯಕ್ಕೆ ಸೇರುತ್ತಿದೆ. ಕಾರಂಜಾ ಜಲಾಶಯದ ನೀರು ಇಡೀ ಬೀದರ್  ನಗರ ಸೇರಿದಂತೆ ಜಿಲ್ಲೆಯ ಜನ ಕುಡಿಯಲು ಉಪಯೋಗಿಸುತ್ತಾರೆ,.

ತಜ್ಞರು ಹೇಳುವ ಪ್ರಕಾರ ಈ ತ್ಯಾಜ್ಯ ಮಿಶ್ರಿತವಾಗಿರುವ ನೀರು ಕುಡಿಯೋದು ಬಿಡಿ ಉಪಯೋಗಕ್ಕೂ ಯೋಗವಿಲ್ಲ ಎಂದಿದ್ದಾರೆ,. ಹಳ್ಳಿದಲ್ಲಿರುವ ಮೀನು, ಏಡಿ, ಹಾವಿನಂತಹ ಜಲಚರಗಳು ರಾಸಾಯನಿಕ ಬೆರೆತ ನೀರಿನಿಂದಾಗಿ ಸತ್ತು ನೀರಿನ ಮೇಲೆ ತೇಲುತ್ತಿವೆ,. ಹಳ್ಳದಲ್ಲಿ ರಾಸಾಯನಿಕ ಯುಕ್ತ ತ್ಯಾಜ್ಯ ಬಿಡುತ್ತಿರೋದರಿಂದ ಮೇಯಲು ಬರುವ ಜಾನುವಾರುಗಳು ಇದೇ ನೀರನ್ನು  ಕುಡಿದು ಮೃತಪಟ್ಟಿವೆ,.ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು, ಸಚಿವರು ಸೇರಿದಂತೆ ಯಾರಿಗೆ ಹೇಳಿದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ.  ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಭೇಟಿ ಕೊಟ್ಟು ವಾರ್ನ್ ಮಾಡಿದ್ದರೂ ಡೋಂಟ್ ಕೇರ್ ಎನ್ನುತ್ತಿದ್ದಾರಂತೆ ಕಂಪನಿ ಮಾಲೀಕರು,.

ಒಟ್ಟಿನಲ್ಲಿ ವರವಾಗಬೇಕಿದ್ದ ಕೈಗಾರಿಕಾ ಕಾರ್ಖಾನೆಗಳು ಇಲ್ಲಿನ ಜನರಿಗೆ ವಿಷಕಂಠಕವಾಗಿ ಕಾಡುತ್ತಿವೆ,. ಅಧಿಕಾರಿಗಳಿಗೆ, ಸರ್ಕಾರಕ್ಕೆ ಖುದ್ದಿ ಸ್ಥಳೀಯ ಶಾಸಕರೇ ಎಷ್ಟೇ ಮನವಿ ಮಾಡಿಕೊಂಡು ಗೋಳಾಡಿದ್ರು ಈ ಕಾರ್ಖಾನೆಗಳು ಸ್ಥಳಾಂತರಕ್ಕೆ ಯಾರೊಬ್ಬರು ಮನಸು ಮಾಡುತ್ತಿಲ್ಲ,. ನರಕಯಾತನೆ ಅನುಭವಿಸುತ್ತಿರುವ ಇಲ್ಲಿನ ಜನರಿಗೆ ಈಗಲಾದರು ನ್ಯಾಯ ಸಿಗುತ್ತಾ ಕಾದು ನೋಡಬೇಕಾಗಿದೆ,.

Video Top Stories