ದುಡ್ಡೇ ದೊಡ್ಡಪ್ಪ ಅಲ್ಲ, ದುಡಿಮೆಯೇ ದೊಡ್ಡಪ್ಪ: ಬೊಮ್ಮಾಯಿ

ಜನಪರ ಯೋಜನೆ, ಜನಪರ ಕಲ್ಯಾಣ, ಅಭಿವೃದ್ಧಿಯಾದರೆ ಮಾತ್ರ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯ. ದುಡಿಯುವ ಕೈಗಳಿಂದ ರಾಜ್ಯ ಕಟ್ಟಲು ಸಾಧ್ಯ ಇದೆ ಹೊರತು ಶ್ರೀಮಂತರಿಂದ ಸಾಧ್ಯವಿಲ್ಲ ಎಂದು ಸಿಎಂ ಬೊಮ್ಮಾಯಿ ಅವರು ಚಿತ್ರದುರ್ಗದಲ್ಲಿ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಚಿತ್ರದುರ್ಗ (ಮಾ.4): ಕೋಟೆ ನಾಡು ಚಿತ್ರದುರ್ಗದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು‌ ಶಿಲಾನ್ಯಾಸ ಕಾರ್ಯಕ್ರಮ, ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದರು. ಈ ವೇಳೆ ಮಾತನಾಡಿದ ಅವರು ರಾಜ್ಯದ ಜನರು ಶ್ರೀಮಂತರು ಆದರೆ ರಾಜ್ಯವು ಶ್ರೀಮಂತವಾಗುತ್ತದೆ. ಅದಕ್ಕೆ ಜನಪರ ಯೋಜನೆ, ಜನಪರ ಕಲ್ಯಾಣ, ಅಭಿವೃದ್ಧಿಯಾದರೆ ಮಾತ್ರ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯ. ದುಡಿಯುವ ಕೈಗಳಿಂದ ರಾಜ್ಯ ಕಟ್ಟಲು ಸಾಧ್ಯ ಇದೆ ಹೊರತು ಶ್ರೀಮಂತರಿಂದ ಸಾಧ್ಯವಿಲ್ಲ ಎಂದಿದ್ದಾರೆ. 

Related Video