ಸಿಗಂಧೂರು ಚೌಡೇಶ್ವರಿ ದೇಗುಲದಲ್ಲಿ ಇದೇನಾಯ್ತು..? ಮುನಿದಳಾ ದೇವತೆ..?

 ಸಿಗಂಧೂರು ದೇಗುಲದಲ್ಲಿ ಧರ್ಮದರ್ಶಿಗಳ ಕಡೆಯವರು ಹಾಗೂ ಅರ್ಚಕರ ನಡುವೆ ವೈಮನಸ್ಯ ಆರಂಭವಾಗಿದೆ. 

ನಾಡಿನ ಪ್ರಸಿದ್ಧ ದೇಗುಲವಾದ ಇಲ್ಲಿ ಲಾಕ್‌ ಡೌನ್ ಅವಧಿಯಲ್ಲಿ ಮುನಿಸು ಆರಂಭವಾಗಿತ್ತು. ಇದು ಮುಂದುವರಿದಿದ್ದು, ತಾರಕಕ್ಕೆ ಏರಿದೆ. 

 

First Published Oct 16, 2020, 1:09 PM IST | Last Updated Oct 16, 2020, 1:53 PM IST

ಶಿವಮೊಗ್ಗ (ಅ.16):  ಸಿಗಂಧೂರು ದೇಗುಲದಲ್ಲಿ ಧರ್ಮದರ್ಶಿಗಳ ಕಡೆಯವರು ಹಾಗೂ ಅರ್ಚಕರ ನಡುವೆ ವೈಮನಸ್ಯ ಆರಂಭವಾಗಿದೆ. ನಾಡಿನ ಪ್ರಸಿದ್ಧ ದೇಗುಲವಾದ ಇಲ್ಲಿ ಲಾಕ್‌ ಡೌನ್ ಅವಧಿಯಲ್ಲಿ ಮುನಿಸು ಆರಂಭವಾಗಿತ್ತು. ಇದು ಮುಂದುವರಿದಿದ್ದು, ತಾರಕಕ್ಕೆ ಏರಿದೆ. 

ಹಾಸನಾಂಬೆ ದೇಗುಲ ಓಪನ್ ಎಂದು : ದೇಗುಲಕ್ಕೆ ಬಾರದೆ ದರ್ಶನ ಪಡೆಯಲು ಇದೆ ಅವಕಾಶ

ಇನ್ನು ಕೆಲ ದಿನಗಳ ಹಿಂದಷ್ಟೇ ಈ ಬಗ್ಗೆ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಕೂಡ ಧ್ವನಿ ಎತ್ತಿ ಅರ್ಚಕರ ವಿರುದ್ಧವೇ ಅಸಮಾಧಾನ ಹೊರಹಾಕಿ, ಮುಜರಾಯಿ ಇಲಾಖೆಗೆ ಒಪ್ಪಿಸುವ ಬಗ್ಗೆ ಮಾತನಾಡಿದ್ದರು.

ಇದೀಗ ಸಿಗಂಧೂರಿನಲ್ಲಿ ನವರಾತ್ರಿ ಅಂಗವಾಗಿ ನಡೆಸುವ ಚಂಡಿಹೋಮಕ್ಕೆ ಅಡ್ಡಿಯಾಗಿದ್ದು, ಸಿಗಂಧೂರು ದೇವಾಲಯದ ಪ್ರಧಾನ ಅರ್ಚಕ ಶೇಷಗಿರಿ ಭಟ್ ಇಲ್ಲಿ ನೋವು ತೋಡಿಕೊಂಡಿದ್ದಾರೆ. ಚೌಡೇಶ್ವರಿಯ ಮುಂದೆ ಕುಟುಂಬ ಸಮೇತ ಮೌನವ್ರತ ಆರಂಭಿಸಿದ್ದಾರೆ.