ಹಾಸನ (ಅ.15):  ಪ್ರತಿ ವರ್ಷದ ದೀಪಾವಳಿ ಸಂದರ್ಭದಲ್ಲಿ ಅಶ್ವಿಜ ಮಾಸದಲ್ಲಿ ವರ್ಷಕ್ಕೊಮ್ಮೆ ಬಾಗಿಲು ತೆರೆದು ದರ್ಶನ ನೀಡುತ್ತಿದ್ದ ಹಾಸನಾಂಬೆ ಈ ಬಾರಿ ನೇರ ದರ್ಶನ ನೀಡುವುದಿಲ್ಲ. ಬದಲಾಗಿ ಭಕ್ತರು ಎಲ್‌ಇಡಿ ಪರದೆ ಮೇಲೆ ಮಾತ್ರವೇ ದರ್ಶನ ಪಡೆಯಬಹುದಾಗಿದೆ.

ಹಾಸನ ನಗರದ ಅದಿದೇವತೆ ಹಾಸನಾಂಬೆ ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವುದರಿಂದಲೇ ದೇಶ ವಿದೇಶಗಳಲ್ಲಿ ಶಕ್ತಿ ದೇವತೆ ಎಂದೇ ಖ್ಯಾತಿ ಪಡೆದಿದ್ದಾಳೆ. ಹಾಗಾಗಿಯೇ ಬಾಗಿಲು ತೆರೆದ ಕೆಲವೇ ದಿನಗಳಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಬಾಗಿಲು ತೆರೆಯುವ ಏಳೆಂಟು ದಿನಗಳಲ್ಲೇ ಮೂರ್ನಾಲ್ಕು ಕೋಟಿ ರುಪಾಯಿ ಕಾಣಿಕೆ ಸಂಗ್ರಹವಾಗುವ ಮೂಲಕ ಎ ಗ್ರೇಡ್‌ ಪಡೆದುಕೊಂಡಿದೆ.

'ಗಂಡ ನಾ ಹೇಳಿದಂತೆ ಕೇಳೋ ಹಾಗೆ ಮಾಡು', ಹಾಸನಾಂಬೆಗೆ ಭಕ್ತೆಯ ಪತ್ರ ..

ಆನ್‌ಲೈನ್‌ ದರ್ಶನ ಮಾತ್ರ:  ಹಾಸನಾಂಬೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನೇರ ದರ್ಶನ ರದ್ಧುಗೊಂಡಿದೆ. ಕೊರೋನಾದಿಂದಾಗಿ ಈ ಬಾರಿ ನೆರ ದರ್ಶನ ಬಂದ್‌ ಮಾಡಿ ದೇವಸ್ಥಾನದ ಎದುರು ಹಾಗೂ ನಗರದ ಕೆಲವೆಡೆ ಎಲ್‌ಇಡಿ ಪರದೆಗಳನ್ನು ಅಳವಡಿಸಿ ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡುವ ನಿರ್ಧಾರಕ್ಕೆ ಜಿಲ್ಲಾಡಳಿತ ಬಂದಿದೆ. ಈ ಸಂಬಂಧ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಈ ತೀರ್ಮಾನ ಕೈಗೊಳ್ಳಲಾಗಿದೆ.

ಹಾಸನಾಂಬೆ ಹುಂಡಿ ಹಣ ಎಣಿಕೆ, ದೇವಿ ಕಾಣಿಕೆಯಲ್ಲಿ ಏರಿಕೆ: 'A' ಗ್ರೇಡ್ ಮುಂದುವರಿಕೆ..! .

ಪ್ರತಿ ವರ್ಷ ಬಾಗಿಲು ತೆರೆದ ದಿನದಿಂದಲೂ ಸಾರ್ವಜನಿಕರಿಗೆ ದರ್ಶನ ಸೌಲಭ್ಯ ಕಲ್ಪಿಸಲಾಗುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದ ಭಕ್ತರ ನಿರ್ವಹಣೆಗಾಗಿ ನೂರಾರು ಪೊಲೀಸರನ್ನು ನಿಯೋಜಿಸಲಾಗುತ್ತಿತ್ತು. ಇದೂ ಸಾಲದಾಗಿ ಸ್ಕೌಟ್‌ ಅಂಡ್‌ ಗೈಡ್‌ , ಹೋಮ್‌ಗಾರ್ಡ್‌, ನಗರಸಭೆ ಸಿಬ್ಬಂದಿ, ಕಂದಾಯ ಇಲಾಖೆ ನೌಕರರು ಹಾಗೂ ಸ್ವಯಂ ಸೇವಕರನ್ನೂ ನಿಯೋಜಿಸಲಾಗುತ್ತಿತ್ತು. ಇದರ ನಡುವೆಯೂ ಶಿಫಾರಸ್ಸಿನ ಮೇರೆಗೆ ಅಲ್ಲಲ್ಲಿ ನುಸುಳುವ ಭಕ್ತರಿಗೇನೂ ಕೊರತೆ ಇರಲಿಲ್ಲ.

ಆದರೆ, ಈ ಬಾರಿ ಇದಕ್ಕೆಲ್ಲಾ ಬ್ರೇಕ್‌ ಬಿದ್ದಿದೆ. ವಾಡಿಕೆಯಂತೆ ಜಿಲ್ಲಾ ಖಜಾನೆಯಿಂದ ಮೆರವಣಿಗೆಯೊಂದಿಗೆ ದೇವರ ಒಡವೆಗಳನ್ನು ಕೊಂಡೊಯ್ಯಲಾಗುವುದು. ದೇವಸ್ಥಾನದಲ್ಲಿ ಮಾಮೂಲಿನಂತೆ ಶಾಸ್ತ್ರ ಸಂಪ್ರದಾಯಗಳು ನಡೆಯಲಿವೆ. ಆದರೆ, ಸಾರ್ವಜನಿಕರ ಪ್ರವೇಶಕ್ಕೆ ಮಾತ್ರ ಅವಕಾಶವಿಲ್ಲ. ಬಾಗಿಲು ತೆರೆಯುವ ದಿನ ಅ​ಕಾರಿಗಳು ಹಾಗೂ ಜನಪ್ರತಿನಿ​ಗಳಿಗೆ ಮಾತ್ರವೇ ಅವಕಾಶ ಇರಲಿದೆ. ಭಕ್ತರಿಗೆ ಅವಕಾಶವೇ ಇಲ್ಲದಿರುವುದರಿಂದ ಬೆರಳೆಣಿಕೆಯ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ನೂರಾರು ಸಿಬ್ಬಂದಿಗಳ ಬದಲಾಗಿ ಕೆಲವೇ ಕೆಲವು ಸಿಬ್ಬಂದಿ ಈ ಬಾರಿ ದೇವರ ಕೆಲಸಕ್ಕೆ ನಿಯೋಜಿತರಾಗಲಿದ್ದಾರೆ.