ಎಲ್ಲಿ ನೋಡಿದ್ರೂ ಶಾಲಾ ಕಟ್ಟಡದಲ್ಲಿ ಬಿರುಕು: ಮೂಲಭೂತ ಸೌಕರ್ಯವಿಲ್ಲದೇ ಸ್ಕೂಲ್ ಅಧ್ವಾನ..!
ಸರ್ಕಾರಿ ಶಾಲೆಗಳ ಉಳುವಿಗಾಗಿ ಸರ್ಕಾರ ನಾನಾ ಯೋಜನೆಗಳನ್ನ ರೂಪಿಸಿಕೊಳ್ಳುತ್ತೆ. ಆದ್ರೆ, ಇರುವ ಶಾ ಲೆಗಳನ್ನ ಅಭಿವೃದ್ಧಿ ಮಾಡೋದ್ರಲ್ಲಿ ಮಾತ್ರ ಹಿಂದೇಟು ಹಾಕುತ್ತೆ. ಹತ್ತಾರು ವರ್ಷಗಳ ಹಿಂದೆ ಸುತ್ತ ಮುತ್ತ ಹಳ್ಳಿಗಳಿಗೆ ಮಾದರಿ ಆಗಿದ್ದ ಈ ಶಾಲೆ ಇಂದು ಅಳಿವಿನ ಅಂಚಿಗೆ ಹೋಗಿರೋದು ದುರದೃಷ್ಟಕರ. ಅಷ್ಟಕ್ಕೂ ಆ ಶಾಲೆ ಎಲ್ಲಿದೆ? ಆ ಶಾಲೆಯ ಸಮಸ್ಯೆಗಳು ಏನು ಅನ್ನೋದ್ರ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ..
ಇವತ್ತೋ ನಾಳೆಯೋ ಬೀಳುವ ಪರಿಸ್ಥಿತಿಯಲ್ಲಿ ಬಿರುಕು ಬಿಟ್ಟಿರುವ ಸರ್ಕಾರಿ ಶಾಲೆ. ಮತ್ತೊಂದೆಡೆ ಮೇಲ್ಛಾವಣಿಯೂ ಜಡಿ ಮಳೆಗೆ ಕುಸಿತ ಕಾಣುತ್ತಿದ್ದು, ಜೀವ ಕೈಯಲ್ಲಿ ಬಿಗಿ ಹಿಡಿದು ಪಾಠ ಕೇಳ್ತಿರುವ ಮಕ್ಕಳು. ಇಂತಹ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಐತಿಹಾಸಿಕ ಬೆಳಗೆರೆ ಗ್ರಾಮದಲ್ಲಿ. ಕಳೆದ ಐವತ್ತು ವರ್ಷಗಳ ಹಿಂದೆ ಈ ಗ್ರಾಮದ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು (School)ಗ್ರಾಮದಲ್ಲಿ ತಲೆ ಎತ್ತಿದ್ದವು. ಆಗಿನ ಕಾಲದಲ್ಲಿ ಇಡೀ ಹತ್ತು ಹಳ್ಳಿಗಳಿಗೆ ಬೆಳಗೆರೆ ಶಾಲೆ ಮಾದರಿಯಾಗಿತ್ತು. ಆದ್ರೆ ಕಳೆದ ನಾಲ್ಕೈದು ವರ್ಷಗಳಿಂದ ಶಾಲೆಯು ಅಳಿವಿನಂಚಿಗೆ ತಲುಪಿದ್ದು ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಗಪ್ ಚುಪ್ ಆಗಿದ್ದಾರೆ.
ಇನ್ನೂ ಗ್ರಾಮದ ಎರಡು ಕಡೆ ಕಿರಿಯ ಮತ್ತು ಹಿರಿಯ ಸರ್ಕಾರಿ ಶಾಲೆಗಳು ಇದ್ದು, ಒಂದು ಕಡೆ ಇರುವ ಕಿರಿಯ ಸರ್ಕಾರಿ ಶಾಲೆಯಲ್ಲಿ ಸುಮಾರು 50ಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ. ಅಲ್ಲಿ ಸೂಕ್ತ ಸೌಲಭ್ಯಗಳಿಲ್ಲದೇ ಮಕ್ಕಳು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಸರಿಯಾದ ಶೌಚಾಲಯವೂ ಇಲ್ಲ, ಮತ್ತೊಂದೆಡೆ ಹಿರಿಯ ಸರ್ಕಾರಿ ಶಾಲೆ ದನದ ದೊಡ್ಡಿಯಂತೆ ಮಾರ್ಪಡಾಗಿದೆ. ಎಲ್ಲಿ ನೋಡಿದ್ರೂ ಬಿರುಕು ಬಿಟ್ಟ ಗೋಡೆಗಳು, ಆತಂಕದಲ್ಲಿಯೇ ಮಕ್ಕಳು ಪಾಠ ಕೇಳ್ತಿದ್ದಾರೆ. ಇಂತಹ ಸ್ಥಿತಿ ನಮ್ಮೂರಿನ ಶಾಲೆಗೆ ಬರುತ್ತೆ ಅಂತ ನಾವು ಯಾರೂ ಭಾವಿಸಿರಲಿಲ್ಲ ಅಂತಾರೆ ಸ್ಥಳೀಯರು
ಸದ್ಯ ಬೆಳಗೆರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ(Schoool) ಆರು ಮತ್ತು ಏಳನೇ ತರಗತಿಯ 20ಕ್ಕೂ ಹೆಚ್ಚು ಮಕ್ಕಳು ಮಾತ್ರ ವಿದ್ಯಾಭ್ಯಾಸ ಮಾಡ್ತಿದ್ದಾರೆ. ಶಾಲೆಯ ದುಸ್ಥಿತಿ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಇತಿಹಾಸ ಹೊಂದಿರುವ ಶಾಲೆಯಲ್ಲಿ ಇಂದು ಮೂಲಭೂತ ಸೌಕರ್ಯ(Basic falities) ಗಳಿಲ್ಲದೇ ಸೊರಗಿರೋದು ತುಂಬಾ ನೋವಿನ ಸಂಗತಿ.
ಇದನ್ನೂ ವೀಕ್ಷಿಸಿ: ಪ್ರಕೃತಿ ವಿಕೋಪದಿಂದ ನಲುಗಿ ಹೋಗಿತ್ತು ಆ ಜಿಲ್ಲೆ..! ದಯಾಮರಣ ಕೋರಿ ರಾಷ್ಟ್ರಪತಿಗೆ ಸಂತ್ರಸ್ತೆ ಪತ್ರ