ಕೋಟೆ ನಾಡಿನಲ್ಲಿ ಅಪರಾಧ ತಡೆಗಟ್ಟಲು ಖಾಕಿ ಮಾಸ್ಟರ್ ಪ್ಲ್ಯಾನ್
ಕೋಟೆ ನಾಡಿನಲ್ಲಿ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ, ನಗರದ ಅಂಗಡಿ ಮಾಲಿಕರು ಸಿಸಿಟಿವಿಯನ್ನು ಒಂದು ವಾರದೊಳಗೆ ಅಳವಡಿಸಬೇಕು. ಇಲ್ಲವಾದಲ್ಲಿ ಅವರ ಅಂಗಡಿ ಲೈಸೆನ್ಸ್ ರದ್ದುಗೊಳಿಸುತ್ತೇವೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು (ಫೆ. 23): ಕೋಟೆ ನಾಡಿನಲ್ಲಿ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ, ನಗರದ ಅಂಗಡಿ ಮಾಲಿಕರು ಸಿಸಿಟಿವಿಯನ್ನು ಒಂದು ವಾರದೊಳಗೆ ಅಳವಡಿಸಬೇಕು. ಇಲ್ಲವಾದಲ್ಲಿ ಅವರ ಅಂಗಡಿ ಲೈಸೆನ್ಸ್ ರದ್ದುಗೊಳಿಸುತ್ತೇವೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಖಾಕಿ ಪಡೆಯ ಈ ಕೆಲಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದರಿಂದ ಸರಗಳ್ಳತನ, ಅಂಗಡಿಯಲ್ಲಿ ಕಳ್ಳತನ, ಮಕ್ಕಳ ಕಳ್ಳತನ ತಪ್ಪಿಸಲು ಸಾಧ್ಯವಾಗುತ್ತದೆ. ಎಲ್ಲರೂ ಸಹಕರಿಸಬೇಕು ಎಂದು ಚಿತ್ರದುರ್ಗ ಎಸ್‌ಪಿ ಮನವಿ ಮಾಡಿದ್ದಾರೆ.