ಸಚಿವರು ಬಂದಾಗ ಫುಲ್ ವ್ಯವಸ್ಥೆ, ಹೋದ ಮೇಲೆ ಎಲ್ಲಾ ಗಂಡಾಗುಂಡಿ!

ಸಚಿವರು ಬಂದಾಗ ಎಲ್ಲ ವ್ಯವಸ್ಥೆ/ ಬಂದು ಹೋದ ಮೇಲೆ ಹೇಳೋರಿಲ್ಲ, ಕೇಳೋರಿಲ್ಲ/ ಇದು ಚಿತ್ರದುರ್ಗ ಜಿಲ್ಲಾಸ್ಪತ್ರೆ ದುಸ್ಥಿತಿ/ ಸಚಿವರ ಕಣ್ಣಿಗೆ ಮಂಕುಬೂದಿ ಎರಚಿದ ಅಧಿಕಾರಿಗಳು

Share this Video
  • FB
  • Linkdin
  • Whatsapp

ಚಿತ್ರದುರ್ಗ[ಜ. 24] ಆರೋಗ್ಯ ಸಚಿವ ಶ್ರೀರಾಮುಲು ಜಿಲ್ಲಾ ಆಸ್ಪತ್ರೆಗಳಲ್ಲಿ ವಾಶ್ತವ್ಯ ಹೂಡುವ ಮಾದರಿ ಕಾರ್ಯ ಹಮ್ಮಿಕೊಂಡಿದ್ದಾರೆ. ಆದರೆ ಇದರ ಇನ್ನೊಂದು ಮುಖವನ್ನು ನಿಮ್ಮ ಮುಂದೆ ತೆರೆದಿಡುತ್ತಿದ್ದೇವೆ.

ಆರೋಗ್ಯ ಸಚಿವರಿಗೆ ಗುಡ್ ನೈಟ್ ಹೇಳಲು ದಿನವಿಡಿ ಪ್ರಾಕ್ಟೀಸ್

ಸಚಿವ ಶ್ರೀರಾಮುಲು ಭೇಟಿ ನೀಡಿದಾಗ ರೋಗಿಗಳಿಗೆ, ಬಾಣಂತಿಯರಿಗೆ ಎಲ್ಲ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಆದರೆ ಸಚಿವರು ವಾಪಸ್ ಹೊರಟ ತಕ್ಷಣವೇ ಬಾಣಂತಿಯರಿಗೆ ನೀಡಿದ್ದ ಹಾಸಿಗೆ ಹಿಂದಕ್ಕೆ ಪಡೆದು ನರಳಾಡುವಂತೆ ಮಾಡಲಾಗಿದೆ.

Related Video