ಈರುಳ್ಳಿಯಲ್ಲ ಬಂಗಾರ! ಚಿತ್ರದುರ್ಗದ ರೈತನ ಜೇಬಿಗೆ 90 ಲಕ್ಷ ರೂ. ಸಿಂಗಾರ!

ಈ ಬಾರಿ ಸುರಿದ ಮಳೆಯಿಂದಾಗಿ ಬೋರ್ವೆಲ್ ಗಳು ಸಹ ರೀಚಾರ್ಜ್ ಆಗಿದ್ದೂ, ಕೋಟೆನಾಡು ಚಿತ್ರದುರ್ಗದ ರೈತರು ಬೆಳೆದ ಈರುಳ್ಳಿಗೆ ಉತ್ತಮ‌ ಬೆಲೆ ಸಿಕ್ಕಿದೆ.ಬಂಗಾರದ ಬೆಳೆ ಬೆಳೆದಷ್ಟು ಸಂತಸ ರೈತರದ್ದು.

First Published Dec 12, 2019, 1:08 PM IST | Last Updated Dec 12, 2019, 1:08 PM IST

ಚಿತ್ರದುರ್ಗ (ಡಿ.12): ನಿರಂತರ ಬರ ಹಾಗೂ ಬೆಳೆನಾಶದಿಂದ ಕಂಗೆಟ್ಟಿದ್ದ ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ರೈತರ ಮೊಗದಲ್ಲಿ‌ ಈರುಳ್ಳಿ‌  ಈ ಬಾರಿ ಬಂಗಾರವನ್ನೇ ಬೆಳೆದಷ್ಟು‌ ಸಂತಸ ಮೂಡಿಸಿದೆ. ಚಿತ್ರದುರ್ಗ ತಾಲ್ಲೂಕು ದೊಡ್ಡಸಿದ್ದವನಹಳ್ಳಿ ಗ್ರಾಮದ ರೈತ ಮಲ್ಲಿಕಾರ್ಜುನ್ ತಮ್ಮ 20 ಎಕರೆ ಜಮೀನಿನಲ್ಲಿ 3700 ಪ್ಯಾಕೇಟ್ ಈರುಳ್ಳಿ ಬೆಳೆದು 90 ಲಕ್ಷ‌ ರೂಪಾಯಿ ಹಣ ಗಳಿಸಿದ್ದಾರೆ. 

ಮಲ್ಲಿಕಾರ್ಜುನ್ ಬೆಳೆದ ಈರುಳ್ಳಿ ಮೂರು‌ ಹಂತದಲ್ಲಿ‌ ಸೇಲ್ ಆಗಿದ್ದು‌, ಒಂದು ಕ್ವಿಂಟಾಲ್‌ಗೆ 3200 ರೂಪಾಯಿಂದ 7000 ದವರೆಗೆ ಬೆಲೆ ಸಿಕ್ಕಿದೆ. ಹೀಗಾಗಿ  ಬಿತ್ತನೆ, ಬೀಜ ಹಾಗೂ ಗೊಬ್ಬರದ ಖರ್ಚು ತೆಗೆದು, 75 ಲಕ್ಷ‌ ಹಣ ಲಾಭವಾಗಿದೆ. ಕಳೆದ ಆರು ವರ್ಷಗಳಿಂದ ನಿರಂತರ ಬರ ತಾಂಡವವಾಡ್ತಿತ್ತು. 

ಮಳೆ ಅನ್ನೋದು ಮರಿಚಿಕೆಯಾಗಿ, ಕೊಳವೆ ಬಾವಿಗಳಲ್ಲಿ ಹನಿನೀರಿಲ್ಲದಂತೆ ಬತ್ತಿ ಬರಿದಾಗಿದ್ವು. ಹೀಗಾಗಿ ಬೆಳೆನಾಶದಿಂದ ಅನ್ನದಾತರು ಕಂಗಾಲಾಗಿದ್ರು. ಅಲ್ಲದೇ ಈ ರೈತ ಸಹ 2013 ರಲ್ಲಿ‌ ತೀವ್ರ ನಷ್ಟ ಅನುಭವಿಸಿದ್ರು..