'ಘರ್ ವಾಪ್ಸಿ' ಗೂಳಿಹಟ್ಟಿ ಶೇಖರ್ ತಾಯಿ ಮತ್ತು ಕುಟುಂಬಗಳು ಹಿಂದು ಧರ್ಮಕ್ಕೆ

* ಹಿಂದು ಧರ್ಮಕ್ಕೆ ಮರಳಿ ಬಂದ ಕುಟುಂಬಗಳು
* ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಹಿಂದು ಧರ್ಮಕ್ಕೆ ವಾಪಸ್
* ಚಿತ್ರದುರ್ಗ ಜಿಲ್ಲೆಯಲ್ಲಿ ಘರ್ ವಾಪಸಿ ಕಾರ್ಯಕ್ರಮ
* ಕಾರಣಾಂತರಗಳಿಂದ ಮತಾಂತರ ಹೊಂದಿದ್ದ ಕುಟುಂಬಗಳು 

Share this Video
  • FB
  • Linkdin
  • Whatsapp

ಚಿತ್ರದುರ್ಗ(ಅ. 10) ಕಾರಣಾಂತರಗಳಿಂದ ಮತಾಂತರ (Religious Conversion)ಹೊಂದಿದ್ದ ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ (Goolihatti Shekhar ) ತಾಯಿ ಹಿಂದು ಧರ್ಮಕ್ಕೆ ವಾಪಸ್ ಆಗಿದ್ದಾರೆ. ಹಾಲುರಾಮೇಶ್ವರ ದೇಗುಲದಲ್ಲಿ ಘರ್ ವಾಪಸಿ ಕಾರ್ಯಕ್ರಮ ನಡೆಯಿತು. ಚಿತ್ರದುರ್ಗ(Chitradurga) ಜಿಲ್ಲೆ ಹೊಸದುರ್ಗ ತಾಲೂಕಿನ ಹಾಲುರಾಮೇಶ್ವರ ದೇಗುಲದಲ್ಲಿ ನಾಲ್ಕು ಕುಟುಂಬಗಳು ಹಿಂದು ಧರ್ಮಕ್ಕೆ ವಾಪಸ್ ಬಂದಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾದಗಿರಿಯಲ್ಲಿ ಇನ್ನೂ ನಿಂತಿಲ್ಲ ಮತಾಂತರ

ಹೊಸದುರ್ಗ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಕಾರ್ಯಕ್ರಮದ ನೇತೃತ್ವವಹಿಸಿಕೊಂಡಿದ್ದರು ಪ್ರದೀಪ್ ಮತ್ತು ಕುಟುಂಬ ಮರಳಿ ಹಿಂದೂ ಧರ್ಮಕ್ಕೆ ಬಂದಿದ್ದಾರೆ. ವಿಶೇಷ ಪೂಜೆ ಸಲ್ಲಿಸಿ ಘರ್ ವಾಪಸಿಯಾದರು

ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದ ನಾಲ್ಕು ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್. ಹೊಸದುರ್ಗದ ಬಲ್ಲಾಳಸಮುದ್ರ ಗ್ರಾಮದ ಅಣ್ಣಪ್ಪ, ನಾರಾಯಣಪ್ಪ, ಗೌರಮ್ಮ, ಪ್ರದೀಪ್ ಸೇರಿ ನಾಲ್ಕು ಕುಟುಂಬಗಳು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದರು. ನಾಲ್ಕು ವರ್ಷಗಳ ಹಿಂದೆ ಕೇರಳದಲ್ಲಿ ಮತಾಂತರವಾಗಿದ್ದ ಕುಟುಂಬಗಳು ಪುನಃ ಹಿಂದು ಧರ್ಮ ಸ್ವೀಕಾರ ಮಾಡಿವೆ. ಕರ್ನಾಟಕ ವಿಧಾನಸಭೆಯಲ್ಲಿಯೂ ಮತಾಂತರದ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. 

Related Video