
ಇಲ್ಲಿನ ಶಾಲಾ ಮಕ್ಕಳ ನರಕಕ್ಕೆ ಮುಕ್ತಿ ಸಿಗೋದು ಯಾವಾಗ?
ಶೌಚಾಯಲಕ್ಕೆ ಹೋಗುವುದಕ್ಕೂ ವಿದ್ಯಾರ್ಥಿಗಳ ಪರದಾಟ| ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ನಡೆದ ಘಟನೆ| ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿನಿಯರ ಪರದಾಟ
ರಾಯಚೂರು(ಜ.30): ಸರ್ಕಾರಿ ಶಾಲೆಯಲ್ಲಿ ಹೆಣ್ಣು ಮಕ್ಕಳು ಶೌಚಾಯಲಕ್ಕೆ ಹೋಗುವುದದಕ್ಕೂ ಪರದಾಡುವಂತ ಪರಿಸ್ಥಿತಿ ಜಿಲ್ಲೆಯ ದೇವದುರ್ಗ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ನಿರ್ಮಾಣವಾಗಿದೆ. ಈ ಶಾಸಕರ ಶಾಲೆಯಲ್ಲಿ ಆರು ಶೌಚಾಲಯಗಳಿವೆ. ಆದರೆ, ಒಂದಕ್ಕೂ ನೀರಿನ ಸಂಪರ್ಕ ಇಲ್ಲ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೀಗಾಗಿ ವಿದ್ಯಾರ್ಥಿನಿಯರು ಟಾಯ್ಲೆಟ್‌ಗೆ ಹೋಗಬೇಕು ಅಂದರೆ ಬಾಟಲ್‌ನಲ್ಲಿ ನೀರು ತುಂಬಿಕೊಂಡು ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಶಾಲೆಯಲ್ಲಿ ಇದ್ದ ಬೋರ್ ಕೂಡ ಕೆಟ್ಟಿದೆ. ಈ ಶಾಲೆಗೆ ನೀರು ಸರಬರಾಜು ಆಗುತ್ತಿಲ್ಲ. ಹೀಗಾಗಿ ಇಲ್ಲಿನ ಮಕ್ಕಳ ಸಮಸ್ಯೆಯನ್ನ ಕೇಳೋರೆ ಇಲ್ಲದಂತಾಗಿದೆ. ಈ ವರದಿಯ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ.
"