ಕಿಚನ್‌ನಲ್ಲಿ ಕಾಳಿಂಗ ಸರ್ಪ! ವಿಡಿಯೋನೇ ನೋಡಕ್ಕಾಗಲ್ಲ, ಮುಂದಿದ್ರೆ ಏನ್ ಗತಿಯೋ!
ಚಿಕ್ಕಮಗಳೂರು: ಅಡುಗೆ ಮನೆಯಲ್ಲಿ ಅವಿತಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿಯುವ ಅಪರೂಪದ, ಅಷ್ಟೇ ಬೆಚ್ಚಿಬೀಳಿಸುವ, ದೃಶ್ಯ ಮೊಬೈಲ್‌ನಲ್ಲಿ ಸೆರೆ
ಚಿಕ್ಕಮಗಳೂರು (ಜು.29): ಅಲ್ಲಿ ಹಾವು ಇದೇ ಅಂದ್ರನೆ ನಾವು ಅತ್ತ ತಲೆ ಹಾಕೋದಿಲ್ಲ. ಅಂತ್ರದಲ್ಲಿ 15 ಅಡಿಯ ಉದ್ದದ ಕಾಳಿಂಗ ಸರ್ಪವೊಂದು ಅಡುಗೆ ಮನೆಯಲ್ಲಿ ವ್ಯಾಸ್ತವ್ಯ ಹೂಡಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸುಂಕಶಾಲೆಯ ಮಂಜುನಾಥ್ ಭಂಡಾರಿ ಎನ್ನುವವರ ಮನೆಯಲ್ಲಿ ಕಾಳಿಂಗ ಸರ್ಪ ಅಡುಗೆ ಮನೆಯನ್ನು ಸೇರಿಕೊಂಡಿತ್ತು. ಹಾವು ನೋಡಿದ ಮನೆಯವರು ಕ್ಷಣಕಾಲ ಆತಂಕಕ್ಕೆ ಒಳಗಾಗಿದ್ದರು. ತಕ್ಷಣವೇ ಮನೆಯ ಮಾಲೀಕ ಮಂಜುನಾಥ್ ಉರಗ ತಜ್ಞ ಆರೀಫ್‌ರನ್ನು ಕರೆಸಿ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಲ್ಲಿ ಯಶ್ವಸಿಯಾಗಿದ್ದಾರೆ.
ಕಾಳಿಂಗವನ್ನು ಹಿಡಿಯುವ ವೇಳೆ ಅದರ ರೋಷಾವೇಶವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದ್ದಾರೆ. ಅಡುಗೆ ಮನೆಯಲ್ಲಿ ಇದ್ದ ಪ್ಲಾಸಿಕ್ ಡಬ್ಬಗಳನ್ನು ಕಚ್ಚಿ ತನ್ನ ರೋಷವನ್ನು ಕಾಳಿಂಗ ಸರ್ಪ ಹೊರಹಾಕಿದೆ. ತದನಂತರ ಹಾವುವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಮೂಡಿಗರೆ ಮೀಸಲು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.