Chikkamagaluru: ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದನ್ನು ತಪ್ಪಿಸಲು ದೇವರು-ದೆವ್ವದ ಮೊರೆ ಹೋದ ನಗರಸಭೆ

ಸಾರ್ವಜನಿಕ ಸ್ಥಳಗಳಲ್ಲಿ (Public Place) ಕಸ (Garbage) ಹಾಕುವುದನ್ನು ತಡೆಯುವುದು ಆಡಳಿತ ವರ್ಗಕ್ಕೆ ದೊಡ್ಡ ಸವಾಲು. ಯಾರೂ ಇಲ್ಲದಿದ್ದಾಗ, ಕತ್ತಲಾದ ಮೇಲೆ ಕಸವನ್ನು ತಂದು ಸಾರ್ವಜನಿಕ ಸ್ಥಳಗಳಲ್ಲಿ ಸುರಿದು ಹೋಗುತ್ತಾರೆ. ಇದನ್ನು ತಪ್ಪಿಸಲು ಚಿಕ್ಕಮಗಳೂರು ನಗರ ಸಭೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. 

First Published Jan 14, 2022, 2:23 PM IST | Last Updated Jan 14, 2022, 2:29 PM IST

ಚಿಕ್ಕಮಗಳೂರು (ಜ. 14): ಸಾರ್ವಜನಿಕ ಸ್ಥಳಗಳಲ್ಲಿ (Public Place) ಕಸ (Garbage) ಹಾಕುವುದನ್ನು ತಡೆಯುವುದು ಆಡಳಿತ ವರ್ಗಕ್ಕೆ ದೊಡ್ಡ ಸವಾಲು. ಯಾರೂ ಇಲ್ಲದಿದ್ದಾಗ, ಕತ್ತಲಾದ ಮೇಲೆ ಕಸವನ್ನು ತಂದು ಸಾರ್ವಜನಿಕ ಸ್ಥಳಗಳಲ್ಲಿ ಸುರಿದು ಹೋಗುತ್ತಾರೆ. ಮನೆ ಬಾಗಿಲಿಗೆ ಆಟೋಗಳು ಬಂದು ಕಸ ಸಂಗ್ರಹಿಸಿದರೂ, ಜನ ಅಲ್ಲಿ ಕಸ ಕೊಡುವುದಿಲ್ಲ. ಇದನ್ನು ತಪ್ಪಿಸಲು ಚಿಕ್ಕಮಗಳೂರು (Chikkamagaluru) ನಗರ ಸಭೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. 

DHFWS Chikkamagaluru Recruitment 2022: ಚಿಕ್ಕಮಗಳೂರಿನಲ್ಲಿ ದಾದಿಯರು ಸೇರಿ ವಿವಿಧ ಹುದ್ದೆಗಳು ಭರ್ತಿಗೆ ಅರ್ಜಿ ಆಹ್ವಾನ

ಕಸ ಹಾಕುವ ಜಾಗಗಳಲ್ಲಿ ಶನಿ ದೇವರ ಫೋಟೋ ಹಾಕಿ, ಇಲ್ಲಿ ಕಸ ಹಾಕಿದರೆ ಅಂಗವಿಕಲರಾಗುತ್ತೀರಿ, ಕನಸಲ್ಲಿ ಭೂತ ಕಾಡುತ್ತದೆ ಎಂದು ಭಯ ಮೂಡುವ ರೀತಿಯಲ್ಲಿ ಫೋಟೋ ಹಾಕಿ ಭಯ ಮೂಡಿಸಲಾಗಿದೆ. ಇದಕ್ಕೂ ಮೀರಿ ಸಾರ್ವಜನಿಕರು ಕಸ ಹಾಕಿದರೆ, ಅವರಿಗೆ ಕೊಟ್ಟಿರುವ ಮೂಲಭೂತ ಸೌಕರ್ಯ ಬಂದ್ ಮಾಡುವುದಾಗಿ ಪಾಲಿಕೆ ಮನವಿ ಮಾಡಿದೆ. 

Video Top Stories