Asianet Suvarna News Asianet Suvarna News

ಚಿಕ್ಕಮಗಳೂರು: ಈ ದೇಗುಲದಲ್ಲಿ ಕನ್ನಡದಲ್ಲೇ ಪೂಜೆ, ಹೋಮ, ಹವನ, ಮದುವೆ ನಡೆಯುತ್ತೆ!

Nov 2, 2021, 12:58 PM IST

ಚಿಕ್ಕಮಗಳೂರು (ಅ. 02):  ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂದು ನಾವು ಹೇಳುತ್ತಲೇ ಇರುತ್ತೇವೆ. ಆದರೆ ಆ ನಿಟ್ಟಿನಲ್ಲಿ ಪ್ರಯತ್ನ ಪಡುತ್ತೇವಾ..? ಉತ್ತರವನ್ನು ನಾವೇ ಕಂಡುಕೊಳ್ಳಬೇಕು.

ಕನ್ನಡ ಉಳಿಸಿ, ಬೆಳೆಸಲು ಸರ್ಕಾರ ಏನು ಮಾಡಬೇಕು? 10 ಸರಳ ಸಲಹೆಗಳು

ಹಿರೇಮಗಳೂರಿನ (Heeremagaluru) ಶ್ರೀಕೋದಂಡರಾಮ ದೇವಾಲಯದಲ್ಲಿ ಕನ್ನಡದಲ್ಲಿಯೇ ಪೂಜೆ ನಡೆಯುತ್ತದೆ. ಮಂತ್ರ ಪಠಣ, ಹೋಮ, ಹವನ ಹಾಗೂ ಮದುವೆಯೂ ಕನ್ನಡದಲ್ಲಿಯೇ ನಡೆಯುತ್ತದೆ. ಹಿರೇಮಗಳೂರು ಕಣ್ಣನ್ (Heeremagaluru Kannan) ಕನ್ನಡದಲ್ಲಿಯೇ ಕೋದಂಡರಾಮನಿಗೆ ಪೂಜೆ ಸಲ್ಲಿಸುತ್ತಾರೆ. ಈ ದೇವಾಲಯ ಒಳಹೊಕ್ಕರೆ ಗೋಡೆಗಳ ಮೇಲೆಲ್ಲಾ ಕನ್ನಡ ರಾರಾಜಿಸುವುದನ್ನು ನೋಡಬಹುದು. ಬರುವ ಭಕ್ತರಿಗೆ ಕನ್ನಡದಲ್ಲಿಯೇ ಶ್ಲೋಕದ ಅರ್ಥವನ್ನು ವಿವರಿಸಲಾಗುತ್ತದೆ.  ಈ ಬಗ್ಗೆ ಕನ್ನಡದ ಪೂಜಾರಿ ಎಂದೇ ಖ್ಯಾತರಾಗಿರುವ ಹಿರೇಮಗಳೂರು ಕಣ್ಣನ್ ಮಾತುಗಳು. 

 

Video Top Stories