ಚಿಕ್ಕಮಗಳೂರು: ಕಣ್ಮನ ಸೆಳೆಯುತ್ತಿದೆ ಹಸಿರು ಬೆಟ್ಟದಲ್ಲಿ ನೀಲಿ ಹೂವಿನ ಕಮಾಲ್

ಚಿಕ್ಕಮಗಳೂರಿನಲ್ಲಿ ಅಪರೂಪದ ಕುರಂಜಿ ನೋಡುಗರ ಕಣ್ಮನ ಸೆಳೆಯೋದ್ರ ಜೊತೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ,

Share this Video
  • FB
  • Linkdin
  • Whatsapp

ಚಿಕ್ಕಮಗಳೂರು (ಸೆ. 17): ಕಾಫಿನಾಡಲ್ಲಿ ಅರಳಿ ನಿಂತಿರೋ ಅಪರೂಪದ ಹೂವೊಂದು ಇಲ್ಲಿನ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆಯನ್ನ ಇಮ್ಮಡಿಗೊಳಿಸಿದೆ. 12 ವರ್ಷಗಳಿಗೊಮ್ಮೆ ಅರಳೋ ಕುರಂಜಿ ಹೂವು ಕಾಫಿನಾಡಿನ ಸೌಂದರ್ಯದ ದಿಕ್ಕನ್ನೇ ಬದಲಿಸಲಿದೆ. ಕಣ್ಣು ಹಾಯಿಸಿದಲೆಲ್ಲಾ ಕಾಣೋ ಅಪರೂಪದ ಕುರಂಜಿ ನೋಡುಗರ ಕಣ್ಮನ ಸೆಳೆಯೋದ್ರ ಜೊತೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. 

7 ವರ್ಷಗಳ ಪ್ರಯತ್ನ, ವಿಶೇಷಚೇತನನಿಂದ ವಿಶಿಷ್ಟ ಟವರ್ ಕ್ಲಾಕ್, ಸಾಧನೆಗಿರಲಿ ಶಹಭ್ಭಾಸ್..!

ಬೆಟ್ಟ-ಗುಡ್ಡಗಳೆಲ್ಲಾ ನೀಲಿಯಾಗಿ ಕಂಗೊಳಿಸೋ ಕಾಲ ಸನ್ನಿಹಿತ.ಮುಳ್ಳಯ್ಯನಗಿರಿ ಶ್ರೇಣಿಯ ರಸ್ತೆಯ ಇಕ್ಕೆಲಗಳಲ್ಲಿ ಅರಳಿ ನಿಂತಿರೋ ಈ ಕುರಂಜಿ ಪ್ರವಾಸಿಗರನ್ನ ಸ್ವಾಗತಿಸುತ್ತಿದೆ. ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಮಾತ್ರ ಅರಳೋ ಈ ಹೂವು ಕಾಫಿನಾಡಿನ ಚಂದ್ರದ್ರೋಣ ಪರ್ವತ, ದೇವರಮನೆ ಬೆಟ್ಟ, ಚಾರ್ಮಾಡಿ ಬೆಟ್ಟ ಸೇರಿದಂತೆ ಕಾಫಿನಾಡ ಮುಳ್ಳಯ್ಯನಗಿರಿ ಶ್ರೇಣಿಯಲ್ಲಿ ಅರಳಿ ನಿಂತಿವೆ. ಪಶ್ವಿಮಘಟ್ಟ ಸಂರಕ್ಷಿತ ಪ್ರದೇಶವಾಗಿರೋದ್ರಿಂದ ಈ ಹೂವು ಇನ್ನೂ ಜೀವಂತವಾಗಿದ್ದು, ಪ್ರತಿ 12 ವರ್ಷಕೊಮ್ಮೆ ಕಾಫಿನಾಡನ್ನ ಭೂ ಲೋಕದ ಸ್ವರ್ಗವಾಗಿಸ್ತಿದೆ. 

Related Video