Asianet Suvarna News Asianet Suvarna News

ಚಿಕ್ಕಮಗಳೂರು: ಈರುಳ್ಳಿ ಧಾರಣೆ ಕುಸಿತ, ಕಂಗಾಲಾದ ರೈತ

- ಈರುಳ್ಳಿ ಧಾರಣೆ ಕುಸಿತ, ಕಂಗಾಲಾದ ರೈತ 

- ಕೆ.ಜಿ ಗೆ 4ರಿಂದ 6 ರೂಪಾಯಿಗೆ ಖರೀದಿ 

- ಈರುಳ್ಳಿ ಬೆಳೆ ಬೆಳೆದ ರೈತನ ಸ್ಥಿತಿ ಚಿಂತಾಜನಕ
 

Sep 25, 2021, 5:09 PM IST

ಬೆಂಗಳೂರು (ಸೆ. 25): ಕಳೆದ ಬಾರಿ ಬಂಪರ್ ಬೆಳೆಯಿಂದಾಗಿ ರೈತರಿಗೆ ಯಥೇಚ್ಚ ಲಾಭ ತಂದುಕೊಟ್ಟಿದ್ದ ಈರುಳ್ಳಿ ಈ ಬಾರಿ ಕಣ್ಣೀರು ತರಿಸಿದೆ. ಚಿಕ್ಕಮಗಳೂರಿನ ಬಯಲುಸೀಮೆ ಭಾಗದಲ್ಲಿ ಬೆಳೆದಿರೋ ಶೇ. 70 ರಷ್ಟು ಈರುಳ್ಳಿ ಬೆಳೆಯನ್ನು ಕೇಳುವರೇ ಇಲ್ಲ ಎನ್ನುವ ಪರಿಸ್ಥಿತಿ ಉದ್ಬವವಾಗಿದೆ.  

ಹೈವೇ ಉದ್ಘಾಟನೆಗೆ ಮೀನಮೇಷ, ವಾಹನಗಳ ಓಡಾಟದಿಂದ ಹೆಚ್ಚಾಗಿದೆ ಅಪಘಾತಗಳ ಭಯ!

ಈಗಾಗಲೇ ಅಜ್ಜಂಪುರ ತಾಲೂಕಿನಾದ್ಯಂತ 11 ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದ್ದು, ಕಟಾವಿಗೆ ಬಂದಿದೆ. ಆದ್ರೆ ಬೆಲೆ ಮಾತ್ರ ಪಾತಾಳಕ್ಕೆ ಕುಸಿದಿದ್ದು, ಸಾಲಗಾರರಿಗೆ ನಾವು ಸಾಲವನ್ನ ಹೇಗೆ ಮರು ಪಾವತಿಸೋದು ಎಂಬ ಚಿಂತೆಯಾಗಿದೆ. ಮಾರುಕಟ್ಟೆಯಲ್ಲಿ ರೈತರಿಂದ ಕೆ.ಜೆ 4ರಿಂದ 6 ರೂಪಾಯಿ ವರೆಗೆ ಖರೀದಿ ಮಾಡುತ್ತಿದ್ದಾರೆ.  ಹೀಗಾಗಿ ಸಾಲ ಸೋಲ ಮಾಡಿ ಈರುಳ್ಳಿ ಬೆಲೆಯನ್ನ ಬೆಳೆದಿದ್ದ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದು, ಸೂಕ್ತ ಪರಿಹಾರ ನೀಡುವಂತೆ ಸರ್ಕಾರವನ್ನ ಆಗ್ರಹಿಸಿದ್ದಾರೆ.