Chikkamagalur Tourism: ಎತ್ತಿನ ಭುಜಕ್ಕೆ ಹೋಗುವ ಪ್ರವಾಸಿರಿಗೆ ಶಾಕ್..!

ಈ ಭೂಲೋಕದ ಸ್ವರ್ಗದಂತಿರುವ ಎತ್ತಿನಭುಜದ ಪ್ರಕೃತಿ ಸೌಂದರ್ಯ ಸವಿಯಲು ಬರುವ ಪ್ರವಾಸಿಗರಿಗೆ ಅರಣ್ಯ ಇಲಾಖೆ ಏಕಾಏಕಿ ಶಾಕ್ ನೀಡಿದೆ. ತಾತ್ಕಲಿಕವಾಗಿ ಪ್ರವಾಸಿಗರಿಗೆ ಪುಲ್ ಬ್ರೇಕ್ ಹಾಕಿದೆ.

First Published Dec 4, 2021, 1:21 PM IST | Last Updated Dec 4, 2021, 1:45 PM IST

ಚಿಕ್ಕಮಗಳೂರು (ಡಿ. 04):  ಈ ಭೂಲೋಕದ ಸ್ವರ್ಗದಂತಿರುವ ಎತ್ತಿನಭುಜದ (Yettinabhuja) ಪ್ರಕೃತಿ ಸೌಂದರ್ಯ ಸವಿಯಲು ಬರುವ ಪ್ರವಾಸಿಗರಿಗೆ (Tourists)  ಅರಣ್ಯ ಇಲಾಖೆ ಏಕಾಏಕಿ ಶಾಕ್ ನೀಡಿದೆ. ತಾತ್ಕಲಿಕವಾಗಿ ಪ್ರವಾಸಿಗರಿಗೆ ಪುಲ್ ಬ್ರೇಕ್ ಹಾಕಿದೆ. ಬೆಂಗಳೂರಿನ ಖಾಸಗಿ ಸಂಸ್ಥೆಯೊಂದು ಎತ್ತಿನಭುಜದ ಸಮೀಪ ಮ್ಯಾರಥಾನ್ (Marathon) ಆಯೋಜಿಸಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳೀಯರು ವಿರೋಧಿಸಿದರು.  ಹೀಗಾಗಿಯೇ ಎತ್ತಿನಭುಜಕ್ಕೆ ಹೋಗುವ ಮಾರ್ಗವನ್ನು ಅರಣ್ಯ ಇಲಾಖೆ ಬಂದ್ ಮಾಡಿದೆ. ಇನ್ಮುಂದೆ ಹೊಸ ರೂಲ್ಸ್ ಮಾಡಿದ ಮೇಲೆಯೇ ಓಪನ್ ಅಂತಾ ಹೇಳಿದೆ. 

ಇನ್ನೂ ಖಾಸಗಿ ಸಂಸ್ಥೆಯವರು ನಡೆಸುವ ಮ್ಯಾರಥಾನ್ ಎತ್ತಿನಭುಜದ ಸೂಕ್ಷ್ಮ ಜಾಗದಲ್ಲೆಲ್ಲ ನೂರಾರು ಮಂದಿ ಹೋಗ್ತಾರೆ. ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಅನ್ನುವ ದೂರು ಅರಣ್ಯ ಇಲಾಖೆಗೆ ಹೋಗಿತ್ತು. ಇಲಾಖೆಯಿಂದ ಬ್ರೇಕ್ ಹಾಕಿದ್ರಿಂದ ಎತ್ತಿನಭುಜದ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ಬಿಟ್ಟು ಬೇರೆಡೆ ಮ್ಯಾರಥಾನ್ ನಡೆಯಿತು.  ಇದ್ರ ನಡುವೆ ಅರಣ್ಯ ಇಲಾಖೆ ತಾತ್ಕಲಿಕವಾಗಿ ಶಿಶಿಲ ಬೈರಾಪುರದಲ್ಲಿ ಹೋಗುವ ಟ್ರಕ್ಕಿಂಗ್‌ಗೆ ಬ್ರೇಕ್ ಹಾಕಿದೆ. ಇದರಿಂದ ಪ್ರವಾಸಿಗರಿಗಂತೂ ಬೇಸರ ತರಿಸಿದೆ. ಶಾಶ್ವತವಾಗಿ ಪ್ರವಾಸಿಗರನ್ನು ನಿಷೇಧಿಸಿ ಆನೆ, ಮನುಷ್ಯನ ನಡುವೆ ನಡೆಯೋ ಸಂಘರ್ಷಕ್ಕೆ ಬ್ರೇಕ್ ಹಾಕಿ ಎಂದು ಪರಿಸರವಾದಿಗಳು ಮತ್ತೊಂದು ಅಗ್ರಹ ಮುಂದಿಟ್ಟಿದ್ದಾರೆ.  

Video Top Stories