ಚಿಕ್ಕಬಳ್ಳಾಪುರ ಉತ್ಸವದಲ್ಲಿ ರಮ್ಯಾ ಭಾಗಿ, ಸಚಿವ ಸುಧಾಕರ್ ಕೆಲಸಕ್ಕೆ ಶ್ಲಾಘನೆ!

ಚಿಕ್ಕಬಳ್ಳಾಪುರ ಉತ್ಸವದಲ್ಲಿ ಪಾಲ್ಗೊಂಡಿದ್ದ ನಟಿ ರಮ್ಯಾ ಆರೋಗ್ಯ ಸಚಿವ ಡಾ.ಸುಧಾಕರ್ ಅವರನ್ನು ಹಾಡಿ ಹೊಗಳಿದ್ದಾರೆ.

First Published Jan 16, 2023, 8:54 PM IST | Last Updated Jan 16, 2023, 10:30 PM IST

ಬೆಂಗಳೂರು (ಜ.16):ಚಿಕ್ಕಬಳ್ಳಾಪುರ ಉತ್ಸವದಲ್ಲಿ ಪಾಲ್ಗೊಂಡಿದ್ದ ನಟಿ ರಮ್ಯಾ ಆರೋಗ್ಯ ಸಚಿವ ಡಾ.ಸುಧಾಕರ್ ಅವರನ್ನು ಹಾಡಿ ಹೊಗಳಿದ್ದಾರೆ. ಸುಧಾಕರ್ ಅವರು ನನ್ನ ತಂದೆಗೆ ಮೊದಲು ಫ್ರೆಂಡ್, ಆಮೇಲೆ ನನಗೆ ಅವರು ಪರಿಚಯ ಆದರು ಎಂದು ಈ ವೇಳೆ ಜೋರಾಗಿ ಚಪ್ಪಾಳೆ ಹಾಗೂ ವಿಶಲ್ ಸದ್ದು ಕೇಳಿ ಬಂತು, ಇದನ್ನು ಗಮನಿಸಿದ ರಮ್ಯಾ.. ‘ಮೈ ಗಾಡಾ, ಹೀರೋಗಿಂತ ನಿಮಗೆ ಜಾಸ್ತಿ ವಿಶಲ್.. ಡಾ.ಸುಧಾಕರ್ ಅವರೇ ಎಂದರು. ನಾವೆಷ್ಟೇ ಕ್ಲೋಸ್ ಆದರೂ ನಾನು ಯಾವತ್ತೂ ಈ ಮಾತನ್ನು ಹೇಳಿರಲಿಲ್ಲ. ನಿಮ್ಮ ಎಲ್ಲರ ಎದುರು ನಾನು ಇವತ್ತು ಹೇಳ್ತಿದ್ದೀನಿ, ನನಗೆ ತುಂಬಾ ಖುಷಿ ಆಗುತ್ತಿದೆ. ಫ್ರೆಂಡ್ ಆಗಿ ಹೆಮ್ಮೆ ಎನಿಸುತ್ತಿದೆ. ಏಕೆಂದರೆ ಸುಧಾಕರ್ ಅವರು ರಾಜಕೀಯ  ಕುಟುಂಬದಿಂದ ಬಂದಿಲ್ಲ. ಆದರೂ ರಾಜಕೀಯಕ್ಕೆ ಬಂದು, ಎಷ್ಟೇ ಕಷ್ಟವಿದ್ದರೂ ಕೂಡ ಎಲ್ಲವನ್ನು ಎದುರಿಸಿ ಇವತ್ತು ಚಿಕ್ಕಬಳ್ಳಾಪುರವನ್ನು ಇಷ್ಟು ಅಭಿವೃದ್ಧಿ ಮಾಡಿ ಹೆಸರು ಪಡೆದಿದ್ದೀರಿ. ಇಲ್ಲಿನ ಜನರ ಮುಖದಲ್ಲಿ ಖುಷಿ ನೋಡಿದರೆ ಇದು ಗೊತ್ತಾಗುತ್ತೆ, ಅವರು ನಿಮ್ಮೊಂದಿಗೆ ಸಂತೋಷವಾಗಿದ್ದಾರೆ ಎಂದು ಹೇಳಿದ್ದಾರೆ.