Asianet Suvarna News Asianet Suvarna News

ಮೈಸೂರಲ್ಲಿ ಎಂಪಿಗಳಿಗೊಂದು ಕಾನೂನು, ಸಾಮಾನ್ಯರಿಗೆ ಮತ್ತೊಂದು ಕಾನೂನಾ..?

ಚಾಮುಂಡೇಶ್ವರಿ ಭಕ್ತರು ಪೊಲೀಸರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕಾರಣ ಕೊರೋನಾದಿಂದಾಗಿ ಚಾಮುಂಡಿ ಬೆಟ್ಟಕ್ಕೆ ಜನ ಸಾಮಾನ್ಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇಂತಹ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಚಾಮುಂಡಿ ಬೆಟ್ಟ ಏರಿದ್ದಾರೆ.

First Published Jul 17, 2020, 1:58 PM IST | Last Updated Jul 17, 2020, 1:58 PM IST

ಮೈಸೂರು(ಜು.17): ಚಾಮುಂಡಿ ಬೆಟ್ಟ ಏರುವ ವಿಚಾರದಲ್ಲಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಸಂಸದರಿಗೊಂದು ಕಾನೂನು, ಜನ ಸಾಮಾನ್ಯರಿಗೊಂದು ಕಾನೂನಾ? ಎನ್ನುವ ಪ್ರಶ್ನೆ ಎದ್ದಿದೆ. 

ಇದೀಗ ಚಾಮುಂಡೇಶ್ವರಿ ಭಕ್ತರು ಪೊಲೀಸರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕಾರಣ ಕೊರೋನಾದಿಂದಾಗಿ ಚಾಮುಂಡಿ ಬೆಟ್ಟಕ್ಕೆ ಜನ ಸಾಮಾನ್ಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇಂತಹ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಚಾಮುಂಡಿ ಬೆಟ್ಟ ಏರಿದ್ದಾರೆ.

ಅರ್ಜುನ‌ ವಿಜೇತ ಪ್ಯಾರಾ ಬ್ಯಾಡ್ಮಿಂಟನ್‌ ಪಟು ರಮೇಶ್‌ ಕೋವಿಡ್‌ಗೆ ಬಲಿ

ನಮಗೆ ಅವಕಾಶ ನೀಡಿಲ್ಲ, ಹೀಗಿರುವಾಗ ಶೋಭಾ ಕರಂದ್ಲಾಜೆ ಅವರಿಗೆ ಹೇಗೆ ಚಾಮುಂಡಿ ಬೆಟ್ಟ ಪ್ರವೇಶಿಸಲು ಅವಕಾಶ ನೀಡಿದ್ರಿ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವಾರ ಸಂಸದ ಪ್ರತಾಪ್ ಸಿಂಹ ಕೂಡಾ ಚಾಮುಂಡಿ ಬೆಟ್ಟಕ್ಕೆ ಎಂಟ್ರಿ ಕೊಟ್ಟಿದ್ದರು. ನಮಗ್ಯಾಕೆ ಈ ತಾರತಮ್ಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories