ಕಿಚ್ಚು ಹಾಯಿಸುವಾಗ ಬೇಕಾಬಿಟ್ಟಿ ಓಡಿದ ಗೂಳಿ, ಜನರ ಗೋಳು ಕೇಳಿ..!
ಸಂಕ್ರಾಂತಿ ಆಚರಣೆಯಲ್ಲಿ ಕಿಚ್ಚು ಹಾಯಿಸುವ ಸಂದರ್ಭ ಪಟಾಕಿ ಸದ್ದಿಗೆ ಹೆದರಿದ ಗೂಳಿ ಬೇಕಾಬಿಟ್ಟಿಯಾಗಿ ಓಡಿದೆ. ಪಟಾಕಿ ಸದ್ದಿಗೆ ಬೆದರಿದ ಗೂಳಿ ಎಲ್ಲೆಂದರಲ್ಲಿ ಓಡಿದ್ದು, ತಮ್ಮ ಮಧ್ಯೆಯೇ ಓಡಿ ಬಂದ ಗೂಳಿಯನ್ನು ಕಂಡು ಜನ ಭಯಗೊಂಡಿದ್ದಾರೆ. ಗೂಳಿ ಓಟದ ರಭಸಕ್ಕೆ ಸಿಕ್ಕಿ ನಾಲ್ವರು ವೀಕ್ಷಕರು ಗಾಯಗೊಂಡಿದ್ದಾರೆ.
ಮಂಡ್ಯ(ಜ.16): ಸಂಕ್ರಾಂತಿ ಆಚರಣೆಯಲ್ಲಿ ಕಿಚ್ಚು ಹಾಯಿಸುವ ಸಂದರ್ಭ ಪಟಾಕಿ ಸದ್ದಿಗೆ ಹೆದರಿದ ಗೂಳಿ ಬೇಕಾಬಿಟ್ಟಿಯಾಗಿ ಓಡಿದೆ. ಪಟಾಕಿ ಸದ್ದಿಗೆ ಬೆದರಿದ ಗೂಳಿ ಎಲ್ಲೆಂದರಲ್ಲಿ ಓಡಿದ್ದು, ತಮ್ಮ ಮಧ್ಯೆಯೇ ಓಡಿ ಬಂದ ಗೂಳಿಯನ್ನು ಕಂಡು ಜನ ಭಯಗೊಂಡಿದ್ದಾರೆ. ಗೂಳಿ ಓಟದ ರಭಸಕ್ಕೆ ಸಿಕ್ಕಿ ನಾಲ್ವರು ವೀಕ್ಷಕರು ಗಾಯಗೊಂಡಿದ್ದಾರೆ.
ಪಟಾಕಿ ಸದ್ದಿಗೆ ಹೆದರಿದ ಗೂಳಿ ಜನರ ಮಧ್ಯ ಓಡಿದೆ. ಗೂಳಿ ಓಟದ ರಭಸಕ್ಕೆ ಸಿಕ್ಕಿ ನಾಲ್ವರಿಗೆ ಗಾಯಗಳಾಗಿದ್ದು, ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಘಟನೆ ನಡೆದಿದೆ. ಸಂಕ್ರಾಂತಿ ಕಿಚ್ಚು ಹಾರಿಸುವಾಗ ಘಟನೆ ನಡೆದಿದ್ದು, ಬೆಂಕಿ ಹಾಗೂ ಪಟಾಕಿ ಶಬ್ದಕ್ಕೆ ಹೆದರಿದ ಗೂಳಿ ಬೇಕಾಬಿಟ್ಟಿಯಾಗಿ ಓಡಿದೆ.
ಮಳವಳ್ಳಿಯಲ್ಲಿ ರಾಸುಗಳ ಕಿಚ್ಚೇ ಮೆಚ್ಚು
ಸಂಕ್ರಾಂತಿ ಕಿಚ್ಚು ವೀಕ್ಷಣೆ ಮಾಡುತ್ತಿದ್ದ ಜನರ ಮಧ್ಯ ನುಗ್ಗಿದ ಗೂಳಿ ರಭಸಕ್ಕೆ ಸಿಲುಕಿ ನಾಲ್ವರು ಗಾಯಗೊಂಡಿದ್ದಾರೆ. ಗೂಳಿ ಹಿಡಿಯಲು ಪರದಾಡಿದ ಜನ ಅರ್ಧ ಗಂಟೆ ಬಳಿಕ ಕೊನೆಗೂ ಗೂಳಿ ಹಿಡಿಯುವುದರಲ್ಲಿ ಯಶಸ್ವಿಯಾಗಿದ್ದಾರೆ.
ಸಂಕ್ರಾಂತಿ ಸಂಭ್ರಮ: ಈ ಊರಲ್ಲಿ ದನಗಳ ಮೆರವಣಿಗೆಗೆ ಖರ್ಚು ಮಾಡೋದು ಲಕ್ಷ ಲಕ್ಷ..!