ಮಳವಳ್ಳಿಯಲ್ಲಿ ರಾಸುಗಳ ಕಿಚ್ಚೇ ಮೆಚ್ಚು

ರಾಸುಗಳನ್ನು ಹೂವಿನಿಂದ ಆಲಂಕರಿಸಿ ಕಿಚ್ಚು ಹಾಯಿಸುವುದರ ಮೂಲಕ ಸುಗ್ಗಿಯ ಸಂಕ್ರಾಂತಿ ಹಬ್ಬವನ್ನು ಮಳವಳ್ಳಿ ತಾಲೂಕಿನಾದ್ಯಂತ ಸಂಭ್ರಮದಿಂದ ಸಂಕ್ರಾಂತಿ ಆಚರಿಸಲಾಯಿತು.

sankranthi celebration in malavalli

ಮಂಡ್ಯ(ಜ.16): ರೈತರು ತಮ್ಮ ರಾಸುಗಳನ್ನು ಹೂವಿನಿಂದ ಆಲಂಕರಿಸಿ ಕಿಚ್ಚು ಹಾಯಿಸುವುದರ ಮೂಲಕ ಸುಗ್ಗಿಯ ಸಂಕ್ರಾಂತಿ ಹಬ್ಬವನ್ನು ಮಳವಳ್ಳಿ ತಾಲೂಕಿನಾಧ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಹಸು, ಎಮ್ಮೆ, ಆಡು,ಕುರಿ ಸೇರಿದಂತೆ ರೈತರು ಸಾಕಲಾಗಿರುವ ರಾಸುಗಳಿಗೆ ರಾಗಿ ಮತ್ತು ಭತ್ತದ ಪಚ್ಚೆ, ಸೀಮೆಹುಲ್ಲು ಜೋಳ, ಹುರುಳಿ ಸೇರಿದಂತೆ ವಿವಿಧ ರೀತಿಯ ಮೇವುಗಳನ್ನು ಒಂದು ವಾರದಿಂದಲೂ ಚೆನ್ನಾಗಿ ಮೇಯಿಸಿದ್ದು, ಇಂದು ಬೆಳಿಗ್ಗೆ ಎಲ್ಲಾ ರಾಸುಗಳಿಗೂ ಸ್ನಾನ ಮಾಡಿಸಿ ಮಧ್ಯಾಹ್ನದಿಂದಲೇ ದನಗಳಿಗೆ ವಿವಿಧ ರೀತಿಗಳು ಹೂಗಳು ಬಲೂನ್‌ ಸೇರಿದಂತೆ ಇತರೆ ವಸ್ತುಗಳಿಂದ ಅಲಂಕರಿಸಿ ಸಂಜೆ 5 ಗಂಟೆಗೆ ರೈತರು ಕಿಚ್ಚನ್ನು ಹಾಯಿಸಿದರು.

ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶ, ಅಧ್ಬುತ ಕ್ಷಣ ಕಣ್ತುಂಬಿಕೊಂಡ ಭಕ್ತರು

ಆಧುನಿಕತೆಗೆ ಮೊರೆ ಹೋದ ರೈತರು ದನಕರುಗಳುನ್ನು ಸಾಕುವುದನ್ನು ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ಸಂಕ್ರಾಂತಿ ಹಬ್ಬದಲ್ಲಿ ಕಿಚ್ಚು ಹಾಯಿಸುವ ರಾಸುಗಳ ಪೈಪೋಟಿ ಎಲ್ಲಿಯೂ ಕಂಡು ಬಂದಿಲ್ಲ, ನಾಡಹಸುಗಿಂತ ಇಲಾಖೆ ಹಸುಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಕೇವಲ ಬೆಂಕಿ ದಾಟುವುದಕ್ಕೆ ಮಾತ್ರ ಸೀಮಿತಗೊಳಿಸಿದರು. ತಾಲೂಕಿನ ಪಂಡಿತಹಳ್ಳಿಯಲ್ಲಿ ರಾಸುಗಳ ಮೆರವಣಿಗೆಗೆ ಸಬ್ ಇನ್ಸ್‌ ಪೆಕ್ಟರ್‌ ಮಂಜು ಚಾಲನೆ ನೀಡಿದರು. ಎತ್ತುಗಳನ್ನು ಕೈಯಲ್ಲಿ ಹಿಡಿದು ಮರೆವಣಿಗೆಯಲ್ಲಿ ರೈತರ ಜೊತೆ ಸಾಗುವುದರ ಮೂಲಕ ಸಂಕ್ರಾಂತಿ ಸಂಭ್ರಮವನ್ನು ಆಚರಿಸಿಕೊಂಡರು.

ಸಂಕ್ರಾಂತಿ ಸಂಭ್ರಮ: ಈ ಊರಲ್ಲಿ ದನಗಳ ಮೆರವಣಿಗೆಗೆ ಖರ್ಚು ಮಾಡೋದು ಲಕ್ಷ ಲಕ್ಷ..!

ಈ ವೇಳೆ ಮಾತನಾಡಿದ ಸಬ್‌ಇನ್ಸ್‌ಪೆಕ್ಟರ್‌ ಮಂಜು ಮಾತನಾಡಿ, ಪ್ರಸಕ್ತ ವರ್ಷ ರೈತರು ಸಮೃದ್ಧಿಯಿಂದ ಬೆಳೆ ಬೆಳೆದು ಸಂತೃಪ್ತಿಯಿಂದ ಹಬ್ಬವನ್ನು ಆಚರಿಸುತ್ತಿರುವುದು ಸಂತೋಷದಾಯಕವಾಗಿದೆ. ಮುಂದಿನ ದಿನಗಳಲ್ಲಿಯೂ ಉತ್ತಮವಾಗಿ ಮಳೆಯಾಗಿ ಬೆಳೆ ಬೆಳೆಯಲಿ ಎಂದಿದ್ದಾರೆ.

ಪಟ್ಟಣದ ಪೇಟೆ ಬೀದಿ ಯುವಕರು ಎತ್ತುಗಳಿಗೆ ಬಲೂನ್‌ನಲ್ಲಿ ವಿಶೇಷವಾಗಿ ಆಲಂಕರಿಸುವುದರ ಮೂಲಕ ಗಮನ ಸೆಳೆದರು. ತಾಲೂಕಿನ ತಳಗವಾದಿಯಲ್ಲಿ ಮೇಕೆವೊಂದಕ್ಕೆ ಬಲೂನ್‌ ನಿಂದ ಆಲಂಕಾರ ಮಾಡಿ ಕಿಚ್ಚು ಹಾಯಿಸಿದರು. ಈ ದೃಶ್ಯ ನೋಡುಗರಲ್ಲಿ ನಗೆ ತರಿಸಿತು.

Latest Videos
Follow Us:
Download App:
  • android
  • ios