Asianet Suvarna News Asianet Suvarna News

BMTC ಅಗ್ನಿ ಅವಘಡ: ಬಸ್‌ನಲ್ಲಿ ಹೋಗೋ ಮುನ್ನ ಈ ಸ್ಟೋರಿ ನೋಡಿ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 15 ದಿನದಲ್ಲಿ 3 ಬಿಎಂಟಿಸಿ ಬಸ್‌ಗಳು (BMTC Bus) ಬೆಂಕಿಗಾಹುತಿಯಾಗಿವೆ. ಪ್ರಯಾಣಿಕರು ಬಸ್‌ನಲ್ಲಿರುವಾಗಲೇ ಬೆಂಕಿ ಹತ್ತಿದ್ದು, ಇದರಿಂದ ಬಿಎಂಟಿಸಿ ಬಸ್ ಹತ್ತಲು ಇದೀಗ ಪ್ರಯಾಣಿಕರು ಭಯ ಪಡುತ್ತಿದ್ದಾರೆ.

ಬೆಂಗಳೂರು (ಫೆ.06): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 15 ದಿನದಲ್ಲಿ 3 ಬಿಎಂಟಿಸಿ ಬಸ್‌ಗಳು (BMTC Bus) ಬೆಂಕಿಗಾಹುತಿಯಾಗಿವೆ. ಪ್ರಯಾಣಿಕರು (Passengers) ಬಸ್‌ನಲ್ಲಿರುವಾಗಲೇ ಬೆಂಕಿ ಹತ್ತಿದ್ದು, ಇದರಿಂದ ಬಿಎಂಟಿಸಿ ಬಸ್ ಹತ್ತಲು ಇದೀಗ ಪ್ರಯಾಣಿಕರು ಭಯ ಪಡುತ್ತಿದ್ದಾರೆ. ಬಿಎಂಟಿಸಿ ಬಸ್‌ಗಳಲ್ಲಿ ಇರುವ ಕಳಪೆ ಬಿಡಿಭಾಗಗಳೇ ಅವಘಡಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಮೆಕ್ಯಾನಿಕ್‌ಗಳಿಂದಲೇ ಅಶೋಕ್ ಲೆ-ಲ್ಯಾಂಡ್ ಕಂಪನಿ ಬಸ್‌ಗಳ ನಿರ್ವಹಣೆಯಾಗುತ್ತಿದ್ದು, ಕಳಪೆ ಬಿಡಿ ಭಾಗಗಳನ್ನು ಅಳವಡಿಸಿ ಎಡವಟ್ಟು ಮಾಡಿದ್ದಾರೆ. ಮಾತ್ರವಲ್ಲದೇ ಅಧಿಕಾರಿಗಳ ಹಣದಾಸೆಗೆ 43ಕ್ಕೂ ಹೆಚ್ಚು ಬಸ್‌ಗಳು ಮೂಲೆ ಸೇರಿವೆ. 

ಕರ್ನಾಟಕದಲ್ಲೇ ಕನ್ನಡಕ್ಕೆ ಅವಮಾನ: ಪಬ್‌ನಲ್ಲಿ ಕನ್ನಡಿಗರ ಮೇಲೆ ಅನ್ಯಭಾಷಿಕರ ಧಮ್ಕಿ..?

ಇನ್ನು, ಬಿಎಂಟಿಸಿ ಪ್ರಯಾಣಿಕರ ರಕ್ಷಣೆಗೆ ಮೀಸಲಿಟ್ಟಿದ್ದ ಪ್ರಥಮ ಚಿಕಿತ್ಸಾ ಪೆಟ್ಟಿಗೆ (First Aid Box) ಮಂಗಮಾಯವಾಗಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ನಡೆಸಿದ್ದು, ಈ ಸಂದರ್ಭದಲ್ಲಿ ಬಿಎಂಟಿಸಿ ಬಂಡವಾಳ ಬಯಲಾಗಿದೆ. ರೂಲ್ಸ್ ಪ್ರಕಾರ ಬಿಎಂಟಿಸಿ ಬಸ್‌ನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇರಲೇಬೇಕು. ಆದರೆ ಸಾವಿರಾರು ಜನರು ಪ್ರಯಾಣಿಸುವ ಬಸ್‌ನಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಲ್ಲ. ಕೆಲವು ಬಸ್‌ಗಳಲ್ಲಿ ಪೆಟ್ಟಿಗೆ ಇದ್ದರೂ ಕಾಟನ್, ಬ್ಯಾಂಡೇಜ್ ಸೇರಿದಂತೆ ಬೇಕಾಗಿರುವ ವಸ್ತುಗಳು ಸಿಗುವುದಿಲ್ಲ. ಬಾಕ್ಸ್‌ಗಳನ್ನು ತೆರೆದು ನೋಡಿದರೆ ಹಳೇ ಬಟ್ಟೆಗಳ ಪೀಸ್‌ಗಳು ಸಿಗುತ್ತವೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.