ಲಾಕ್‌ಡೌನ್‌ ಉಲ್ಲಂಘಿಸಿ ಬರ್ತ್‌ಡೇ ಆಚರಣೆ: 'ಮಸಾಲ' ರುಬ್ಬಿದ ಕಟೀಲ್‌!

ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಹುಟ್ಟುಹಬ್ಬ ಆಚರಣೆ ಮಾಡಿದ ಶಾಸಕ ಜಯರಾಮ್‌| ತುಮಕೂರು ಜಿಲ್ಲೆಯ ತುರುವೆರೆ ಕ್ಷೇತ್ರದ ಬಿಜೆಪಿ ಶಾಸಕ ಜಯರಾಮ್‌| ಮೂವರ ವಿರುದ್ಧ ಎಪ್‌ಐಆರ್‌ ದಾಖಲು|

Share this Video
  • FB
  • Linkdin
  • Whatsapp

ಬೆಂಗಳೂರು(ಏ.12): ತುಮಕೂರು ಜಿಲ್ಲೆಯ ತುರುವೆರೆ ಕ್ಷೇತ್ರದ ಬಿಜೆಪಿ ಶಾಸಕ ಜಯರಾಮ್‌ಗೆ ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಹುಟ್ಟುಹಬ್ಬ ಆಚರಣೆ ಮಾಡಿ ಸಮಾರು 100 ಮಂದಿಗೆ ಊಟ ಹಾಕಿಸಿದ್ದಾರೆ. ಈ ಸಂಬಂಧ ಗರಂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಘಟನೆಯ ಸತ್ಯಾಂಶದ ಕುರಿತು ವರದಿ ನೀಡುವಂತೆ ನೋಟೀಸ್‌ ಜಾರಿ ಮಾಡಿದ್ದಾರೆ. ವರದಿ ಬಂದ ಬಳಿಕ ಕ್ರಮ ತೆಗೆದುಕೊಳ್ಳುವ ಬಗ್ಗೆ ನಿರ್ಧಾರವಾಗಲಿದೆ. 

ಬೆಂಗಳೂರಲ್ಲಿ ಡಾಕ್ಟರ್‌ಗೂ ಕೊರೋನಾ ಸೋಂಕು ದೃಢ..!

ಲಾಕ್‌ಡೌನ್‌ ಆದೇಶ ಉಲ್ಲಂಘಣೆ ಮಾಡಿದ್ದರ ಬಗ್ಗೆ ಪೊಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರ ವಿರುದ್ಧ ಎಪ್‌ಐಆರ್‌ ದಾಖಲಿಸಲಾಗಿದೆ. ಇನ್ನು ಜಯರಾಮ್‌ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಕೆಪಿಸಿಸಿ ಅದ್ಯಕ್ಷ ಡಿ.ಕೆ. ಶಿವಕುಮಾರ್‌ ಆಗ್ರಹಿಸಿದ್ದಾರೆ. 

Related Video