Contaminated Milk: ಇದೇನು ಹಾಲೋ, ಹಾಲಾಹಲವೋ?
ಹಸುವಿನ ಆಹಾರದ ಗುಣಮಟ್ಟದ ಮೇಲೆ ಅದು ಕೊಡುವ ಹಾಲಿನ ಗುಣಮಟ್ಟವೂ ನಿಂತಿರುತ್ತದೆ. ಈಚಿನ ದಿನಗಳಲ್ಲಿ ರಾಸಾಯನಿಕಗಳಿಂದ ಬೆಳೆದ ಬೆಳೆ, ಪ್ಲ್ಯಾಸ್ಟಿಕ್ ಸೇರಿದಂತೆ ಸಾಕಷ್ಟು ಅಪಾಯಕಾರಿ ವಸ್ತುಗಳೇ ಹಸುವಿನ ಹೊಟ್ಟೆ ಸೇರುತ್ತಿವೆ. ಅವು ಕೊಡುವ ಹಾಲಿನ ಕತೆಯೇನು? ಅದನ್ನು ಕುಡಿದವರ ಗತಿಯೇನು?
ಹಾಲು(milk) ಅಮೃತಕ್ಕೆ ಸಮಾನ ಎನ್ನುತ್ತೀವಿ. ತಾಯಿಯ ಹಾಲಿನ ನಂತರದಲ್ಲಿ ಹಸುವಿನ ಹಾಲಿನ ಪೋಷಣೆಯಲ್ಲಿಯೇ ಮಕ್ಕಳು ಬೆಳೆಯುತ್ತಾರೆ. ಬೆಳದವರೂ ಆರೋಗ್ಯಕ್ಕಾಗಿ ಹಾಲನ್ನು ಪ್ರತಿದಿನ ಸೇವಿಸುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಸುಗಳಿಗೆ ಸರಿಯಾದ ರಾಸು ಸಿಕ್ಕುವುದಿಲ್ಲ. ಹೊಲಗದ್ದೆಗಳು ಇತರೆಡೆಯಲ್ಲಿ ಏನೇ ಬೆಳೆದರೂ ಅದಕ್ಕೆ ಕಳೆನಾಶಕ ಸೇರಿದಂತೆ ಸೊಂಪಾಗಿ ಬರಲೆಂದು ಸಾಕಷ್ಟು ರಾಸಾಯನಿಕ(Chemicals)ಗಳನ್ನು ಬಳಸಲಾಗುತ್ತದೆ. ಹಸುಗಳು ಇವನ್ನೇ ತಿನ್ನುತ್ತವೆ.
ಮೆದುಳಿನ ಮೇಲೆ ಪರಿಣಾಮ ಬೀರುತ್ತಿದೆ Corona, ಲಘು ಲಕ್ಷಣವಿದ್ದವರಿಗೂ 'ಬ್ರೇನ್ ಫಾಗ್'!
ಇದೂ ಸಿಗದೆ ಹೋದ ಬೀಡಾಡಿ ದನಗಳು ಪ್ಲ್ಯಾಸ್ಟಿಕ್(plastic) ಸೇರಿದಂತೆ ತ್ಯಾಜ್ಯ ಪದಾರ್ಥಗಳನ್ನೇ ತಿನ್ನುತ್ತವೆ. ಕೇವಲ ರಾಸಾಯನಿಕಗಳನ್ನೇ ತಿಂದ ಮೇಲೆ ಅವುಗಳಿಂದ ಬರುವ ಹಾಲೂ ರಾಸಾಯನಿಕಗಳಿಂದ ತುಂಬಿ ವಿಷವೇ ಆಗುವುದಿಲ್ಲವೇ? ಈ ಬಗ್ಗೆ ಪಶು ವೈದ್ಯರೇನಂತಾರೆ? ನಾವು ಕುಡಿಯುವ ಹಾಲು ಎಷ್ಟು ಸುರಕ್ಷಿತ ಎಂಬುದರ ವಿಡಿಯೋ ರಿಪೋರ್ಟ್ ಇಲ್ಲಿದೆ.