Asianet Suvarna News Asianet Suvarna News

ಸದನ ಕದನ ರಣಾಂಗಣ ಆಗಿದ್ದೇಕೆ ಗೊತ್ತಾ..? ವಿಪಕ್ಷಗಳ ಆರೋಪಕ್ಕೆ ಸರ್ಕಾರ ನೀಡಿದ ಉತ್ತರವೇನು ?

ಸರ್ಕಾರಕ್ಕೆ ಸವಾಲು ಹಾಕಲು ಸಿದ್ಧವಾಗಿತ್ತು ಮೈತ್ರಿ ಪಡೆ!
ಮುಂಗಾರು ಅಧಿವೇಶನದ ತುಂಬಾ ಪ್ರಶ್ನೆಗಳ ಸುರಿಮಳೆ!
ವಿಧಾನಸೌಧದಲ್ಲಿ ಮಾರ್ದನಿಸಿದ ಸಂಗತಿಗಳೇನೇನು..?
 

First Published Jul 17, 2024, 5:30 PM IST | Last Updated Jul 17, 2024, 5:30 PM IST

ಸದನದಲ್ಲಿ ಶುರುವಾಗಿದೆ ಮಾತಿನ ಕದನ. ಭುಗಿಲೆದ್ದಿದೆ ಕೋಲಾಹಲ. ಹಗರಣ, ಅಕ್ರಮ ಪ್ರಕರಣ, ಲೂಟಿ ಹಣ. ಇಂಥಾ ವಿಚಾರಗಳೇ ವಿಧಾನಸೌಧದಲ್ಲಿ ಮಾರ್ದನಿಸ್ತಾ ಇದಾವೆ. ಇದೇ ಸೋಮವಾರದಿಂದ ವಿಧಾನಸಭೆಯ ಅಧಿವೇಶನ(Assembly session) ಆರಂಭವಾಯ್ತು. ನಿರೀಕ್ಷೆಯಂತೆ ಆ ಸದನ ಕಣವೇ ಕದನ ಭೂಮಿಯಾಗಿ ಮಾರ್ಪಟ್ಟಿದೆ. 9 ದಿನಗಳ ಕಾಲ, ಅಂದ್ರೆ  ಜುಲೈ 26ರವರೆಗೆ ಈ ಮಳೆಗಾಲದ ಅಧಿವೇಶನ ನಡೆಯಲಿದೆ. ಅಷ್ಟೂ ದಿನವೂ ಇಂಥದ್ದೇ ಯುದ್ಧ ಸನ್ನಿವೇಶ ನೋಡೋ ಸಾಧ್ಯತೆಯಂತೂ ದಟ್ಟವಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ನಂತರ ನಡೀತಿರೊ ಮೊದಲ ಅಧಿವೇಶನ ಇದು. ಲೋಕಸಭಾ ಚುನಾವಣೆ ಗೆಲುವಿನ ಉತ್ಸಾಹದಲ್ಲಿರೋ ಬಿಜೆಪಿ(BJP) ಮತ್ತು ಜೆಡಿಎಸ್‌(JDS), ಸಿದ್ದರಾಮಯ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳೋಕೆ ಸಮನ್ವಯ ಸಭೆಯನ್ನೇ ನಡೆಸಿ ಸನ್ನದ್ಧವಾಗಿದ್ವು. ಆಡಳಿತ ಪಕ್ಷದ ವಿರುದ್ಧ ಹೋರಾಟಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಸಜ್ಜಾಗಿದ್ವು. ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿ ನಡುಕ ಹುಟ್ಟಿಸೋಕೆ ಏನೇನೆಲ್ಲಾ ಸರಕುಗಳು ಬೇಕೋ, ಯಾವೆಲ್ಲಾ ಶಸ್ತ್ರಾಸ್ತ್ರಗಳು ಬೇಕೋ, ಅಷ್ಟೂ ಆಯುಧಗಳು ಈಗ ವಿಪಕ್ಷಗಳ ಬತ್ತಳಿಕೆಯಲ್ಲಿ ಭದ್ರವಾಗಿವೆ. ಆ ಅಸ್ತ್ರಗಳನ್ನೇ ಬಳಸಿಕೊಂಡು, ಸದನದಲ್ಲಿ  ಒಂದೊಂದೇ ಬಾಣ ಪ್ರಯೋಗ ಮಾಡ್ತಾ ಇವೆ, ಮಿತ್ರಪಕ್ಷಗಳು.

ಇದನ್ನೂ ವೀಕ್ಷಿಸಿ:  ಏಕಾಏಕಿ ಕುಸಿದು ಬಿತ್ತು ಗುಡ್ಡ..ಕರಾವಳಿ, ಮಲೆನಾಡು ತತ್ತರ! ಉಕ್ಕಿ ಹರಿಯುತ್ತಿವೆ ಹಳ್ಳ ಕೊಳ್ಳ.. ಸೇತುವೆಗಳು ಜಲಾವೃತ..!

Video Top Stories