Asianet Suvarna News Asianet Suvarna News

ಆನಂದ ಮಾಮನಿ ನಿಧನ: ಜನಸಂಕಲ್ಪ ಯಾತ್ರೆ, ಕಿತ್ತೂರು ಉತ್ಸವ ಮುಂದೂಡಿಕೆ

ವಿಧಾನಸಭಾ ಉಪ ಸಭಾಪತಿ ಆನಂದ ಮಾಮನಿ ನಿಧನ ಹಿನ್ನೆಲೆಯಲ್ಲಿ ಬಿಜೆಪಿಯ ಜನಸಂಕಲ್ಪ ಯಾತ್ರೆ ಹಾಗೂ ಕಿತ್ತೂರು ಉತ್ಸವ ಮುಂದೂಡಲಾಗಿದೆ.
 

First Published Oct 23, 2022, 1:13 PM IST | Last Updated Oct 23, 2022, 1:13 PM IST

ಸವದತ್ತಿ ಕ್ಷೇತ್ರದ ಶಾಸಕ ಹಾಗೂ ಡೆಪ್ಯೂಟಿ ಸ್ಪೀಕರ್ ಆನಂದ್ ಮಾಮನಿ ವಿಧಿವಶರಾಗಿದ್ದು, ಈ ಹಿನ್ನೆಲೆ ಬಿಜೆಪಿಯು ಇಂದು ನಡೆಯಬೇಕಿದ್ದ ಎರಡು ಕಾರ್ಯಕ್ರಮವನ್ನು ಮುಂದೂಡಿದೆ. ಚಿತ್ತಾಪುರ ಹಾಗೂ ಆಳಂದದಲ್ಲಿ ನಡೆಯಬೇಕಿದ್ದ ಜನಸಂಕಲ್ಪ ಯಾತ್ರೆಯು ನವೆಂಬರ್ 6ರಂದು ನಡೆಯಲಿದೆ. ಹಾಗೂ ಇಂದು ನಡೆಯಬೇಕಿದ್ದ ಕಿತ್ತೂರು ಉತ್ಸವ ನಾಳೆಗೆ ಮುಂದೂಡಿಕೆ ಮಾಡಲಾಗಿದ್ದು, ನಾಳೆ ಸಂಜೆ ಕಿತ್ತೂರು ಉತ್ಸವಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ. ಇನ್ನು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸವದತ್ತಿಗೆ ಸಿಎಂ ಆಗಮಿಸುತ್ತಿದ್ದು, ಸಚಿವರು, ಶಾಸಕರು ಇರಲಿದ್ದಾರೆ.

150 ಸೀಟು ಗೆಲ್ಲಲು ರಾಗಾ ಪಾದಯಾತ್ರೆ ಉತ್ಸಾಹ: ಡಿ.ಕೆ.ಶಿವಕುಮಾರ್‌

Video Top Stories