ಹಿಂದೂ ಮುಖಂಡ ಅರುಣ್ ಪುತ್ತಿಲಗೆ ಬಿಜೆಪಿ ಬಾಗಿಲು ಬಂದ್? ಲೋಕಸಭೆಗೆ ಮತ್ತೆ ಬಂಡಾಯ ಫಿಕ್ಸ್!

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದ ಪುತ್ತಿಲಗೆ ನಿರಾಸೆಯಾಗಿದೆ. ಬಿಜೆಪಿ ಜತೆಗಿನ ಅರುಣ್ ಪುತ್ತಿಲ ಸಂಧಾನದ ಬಾಗಿಲು ಬಂದ್ ಆಗಿದೆ.

First Published Jan 15, 2024, 3:54 PM IST | Last Updated Jan 15, 2024, 3:54 PM IST

ದಕ್ಷಿಣ ಕನ್ನಡ (ಜ.15): ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದ ಪುತ್ತಿಲಗೆ ನಿರಾಸೆಯಾಗಿದೆ. ಬಿಜೆಪಿ ಜತೆಗಿನ ಅರುಣ್ ಪುತ್ತಿಲ ಸಂಧಾನದ ಬಾಗಿಲು ಬಂದ್ ಆಗಿದೆ. ಅರುಣ್ ಪುತ್ತಿಲ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದರು. ಮುನಿಸು ಮರೆತು ಒಂದಾಗಲು ಜಿಲ್ಲಾಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದರು. ಬಿ.ಎಲ್.ಸಂತೋಷ್ ಸೇರಿ ಹಲವು ನಾಯಕರ ಭೇಟಿ ವೇಳೆ ಡಿಮ್ಯಾಂಡ್ ಮಾಡಿದ್ದರು. ಕಟೀಲ್ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿದ ಬಳಿಕ ಮತ್ತೆ ಬೇಡಿಕೆ ಸಲ್ಲಿಸಿದ್ದರು. ಈ ಬಗ್ಗೆ ಪುತ್ತಿಲ ಪರಿವಾರದ ಮುಖಂಡರು ವಿಜಯೇಂದ್ರ ಭೇಟಿಯಾಗಿ ಬೇಡಿಕೆ ಇಟ್ಟಿದ್ದರು. ಆದರೂ, ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡದೇ ಪುತ್ತಿಲಗೆ ಕೈ ಕೊಡಲಾಗಿದೆ.

ಇನ್ನು ಅರುಣ್ ಕುಮಾರ್ ಪುತ್ತಿಲ ಅವರು, ಜಿಲ್ಲಾಧ್ಯಕ್ಷ ಸ್ಥಾನ ಸಿಕ್ಕರೆ ಬಂಡಾಯದಿಂದ ಹಿಂದೆ ಸರಿಯೋ ಮಾತು ಹೇಳಿದ್ದರು.ಆದರೆ, ಪುತ್ತಿಲಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲು ಕೆಲ ನಾಯಕರ ವಿರೋಧ ವ್ಯಕ್ತಪಡಿಸಿದ್ದರು. ಪುತ್ತಿಲಗೆ ಸ್ಥಾನಮಾನ ನೀಡಲು ಭಾರೀ ಸ್ಥಳೀಯರ ವಿರೋಧ ವ್ಯಕ್ತವಾಗಿತ್ತು. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಡಿ. ಖಾದರ್ ವಿರುದ್ಧ ಸ್ಪರ್ಧಿಸಿದ್ದ ಸತೀಶ್ ಕುಂಪಲಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡುವಂತೆ ತಿಳಿಸಿದ್ದರು. ಪುತ್ತೂರು ನಗರಸಭೆ ಉಪಚುನಾವಣೆಯಲ್ಲಿ ಪುತ್ತಿಲ  ಬಂಡಾಯವೆದಿದ್ದರು. ಈ ವೇಳೆ ಪುತ್ತಿಲ ಪರಿವಾರ ಎರಡೂ ಸ್ಥಾನಗಳನ್ನೂ ಸೋತಿದ್ದರು. ಆದ್ದರಿಂದ ಪುತ್ತಿಲ ಜಿಲ್ಲಾಧ್ಯಕ್ಷ ಬೇಡಿಕೆಯನ್ನು ಬಿಜೆಪಿ ವರಿಷ್ಠರು ನಿರ್ಲಕ್ಷ್ಯ ಮಾಡಿದ್ದಾರೆ. ಅರುಣ್ ಪುತ್ತಿಲ ವಿರುದ್ಧ ಮತ್ತೆ ಡೋಂಟ್ ಕೇರ್ ಅಸ್ತ್ರ ಪ್ರಯೋಗ ಮಾಡಿದ್ದಾರೆ.

ಶಿವಮೊಗ್ಗದ ಅಭಿವೃದ್ಧಿಗೆ ಕೇಂದ್ರ ಕೊಟ್ಟ ಅನುದಾನ ವಾಪಸಾತಿಗೆ ಪತ್ರ ಬರೆದ ರಾಜ್ಯ ಸರ್ಕಾರ!

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪುತ್ತಿಲ ಬಂಡಾಯ ಫಿಕ್ಸ್ ಆಗಿದೆ. ಪುತ್ತಿಲ ಬಂಡಾಯವೆದ್ದರೂ ಸೈಲೆಂಟ್ ಆಗಿರಲು ಬಿಜೆಪಿ ನಿರ್ಧಾರ ಮಾಡಿದೆ. ಪುತ್ತಿಲ ಜತೆ ಸಂಧಾನ ಮಾತುಕತೆ ನಡೆಸದಿರಲು ಬಿಜೆಪಿ ತೀರ್ಮಾನಿಸಿದೆ. ಅರುಣ್ ಪುತ್ತಿಲಗೆ ಬಿಜೆಪಿ ಜೊತೆಗಿನ ಎಲ್ಲಾ ಬಾಗಿಲುಗಳು ಬಂದ್ ಆಗಿವೆ.

Video Top Stories