BIG3: ಬಾಕಿ ವೇತನ & ಪಿಂಚಣಿ ಹಣಕ್ಕಾಗಿ ನಿವೃತ್ತ ಶಿಕ್ಷಕಿಯ‌ ಅಲೆದಾಟ: ವಯೋವೃದ್ಧೆ ಕಷ್ಟಕ್ಕೆ ಕೊನೆ ಯಾವಾಗ?

ನ್ಯಾಯಕ್ಕಾಗಿ ವಯೋವೃದ್ಧೆ  ಸತತ 33 ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ನಿವೃತ್ತ ಶಿಕ್ಷಕಿ ನಿತ್ಯ ಅಲೆದಾಟ ಯಾರಿಗೂ ಕಾಣಿಸದಂತಾಗಿದೆ.
 

First Published Feb 24, 2023, 3:48 PM IST | Last Updated Feb 24, 2023, 4:17 PM IST

ದಾವಣಗೆರೆ ನಗರದಲ್ಲಿ ವಾಸಕ್ಕೆ ಸೂರಿಲ್ಲದೇ ಕುಸಿದು ಬೀಳುವ ಸ್ಥಿತಿಯಲ್ಲಿರುವ ಪುಟ್ಟ ಮನೆಯಲ್ಲಿ ಕಳೆದ 25 ವರ್ಷಗಳಿಂದ ನಿವೃತ್ತ ಶಿಕ್ಷಕಿ‌ ಪದ್ಮಾವತಿ ವಾಸವಾಗಿದ್ದಾರೆ. ತಮಗಾದ ಅನ್ಯಾಯಕ್ಕೆ ಬೇಸತ್ತು 33 ವರ್ಷಗಳಿಂದ ಶಾಲಾ ಆಡಳಿತ ಮಂಡಳಿಯ ವ್ಯವಸ್ಥೆ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದಾರೆ. ಬಾಕಿ ವೇತನ ಹಾಗೂ ಪಿಂಚಣಿ ಹಣಕ್ಕಾಗಿ ಸತತ 33 ವರ್ಷಗಳಿಂದ ಸಂಬಂಧಿಸಿದ ಕಚೇರಿಗೆ ಅಲೆದು ಅಲೆದು ಬೇಸತ್ತಿದ್ದಾರೆ.
ಪದ್ಮಾವತಿ ಅವರಿಗೆ ವಯಸ್ಸಾಗಿದ್ದು, ತನ್ನ ವಿಕಲಚೇತನ ಮಗನೊಂದಿಗೆ ಬಾಡಿಗೆ ಮನೆಯಲ್ಲಿ ಕಷ್ಟಕರ ಜೀವನ ನಡೆಸುತ್ತಿದ್ದು ತುತ್ತು ಅನ್ನಕ್ಕೂ ಪರದಾಟ ನಡೆಸುತ್ತಿದ್ದಾರೆ. ಪದ್ಮಾವತಿ ಅವರಿಗೆ 53 ಲಕ್ಷದ 45 ಸಾವಿರ ಹಣ  ಬರಬೇಕಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಮಾತ್ರ ನೋಡೋಣ ಮಾಡೋಣ ಅನ್ನೋ ಉಡಾಫೆ ಉತ್ತರ ನಿಡ್ತಿದ್ದಾರಂತೆ. ಒಟ್ಟಿನಲ್ಲಿ ಅದೇನೆ ಇರಲಿ ಅದೆಷ್ಟೋ ಮಕ್ಕಳ ಬದುಕಿಗೆ ಬೆಳಕು ನೀಡಿದ ಈ ಶಿಕ್ಷಕಿಯ ಬದುಕು ಮಾತ್ರ ಕತ್ತಲಾಗಿದ್ದು ಸಂಬಂಧಿಸಿದವರು ಕೂಡಲೇ ಸಮಸ್ಯೆ ಬಗೆಹರಿಸಿ ಎಂದು ಬಿಗ್-3 ಆಗ್ರಹಿಸುತ್ತಿದೆ.  

 BIG3 : ಶಾಲೆಯ ಆವರಣದಲ್ಲಿ ಶಿಥಿಲಗೊಂಡ ನೀರಿನ ಟ್ಯಾಂಕ್: ಭಯದಲ್ಲಿ ಮಕ್ಕಳ ಓಡಾಟ