ಗದಗ ಡಾರ್ಕ್ ಮಾರ್ಕೆಟ್‌ಗೆ ಕೊನೆಗೂ ಬಂತು ಬೆಳಕು: ಇದು ಬಿಗ್-3 ಫಲಶ್ರುತಿ

ಗದಗ ನಗರದ ಕತ್ತಲೆ ಮಾರ್ಕೆಟ್ ಸುದ್ದಿಯನ್ನು ಬಿಗ್ 3 ಪ್ರಸಾರ ಮಾಡಿತ್ತು. ಅದು ಇಂಪ್ಯಾಕ್ಟ್ ಆಗಿದೆ. ಇಲ್ಲಿದೆ ಡಿಟೇಲ್ಸ್.

Share this Video
  • FB
  • Linkdin
  • Whatsapp

ಗದಗ ನಗರದ ಹೃದಯ ಭಾಗದಲ್ಲಿನ ತರಕಾರಿ ಮಾರ್ಕೆಟ್'ನಲ್ಲಿ, 40ಕ್ಕೂ ಹೆಚ್ಚು ತರಕಾರಿ ಮಳಿಗೆಗಳ ವ್ಯಾಪಾರಸ್ಥರು ದೀಪದ ಬೆಳಕಲ್ಲೇ ವ್ಯಾಪಾರ ಮಾಡ್ತಿದ್ರು. ಸಂಬಂಧಿಸಿದವರು ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈ ಬಗ್ಗೆ ಬಿಗ್-3ಯಲ್ಲಿ ವರದಿ ಪ್ರಸಾರ ಮಾಡಿ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಬಿಗ್-3ಯಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಎಚ್ಚೆತ್ತ, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ್, ಸ್ಥಳಕ್ಕೆ ಭೇಟಿ ನೀಡಿದ್ರು. ವ್ಯಾಪಾರಸ್ಥರಿಂದ ಮಾಹಿತಿ ಪಡೆದರು. ನಂತರ ಅಧಿಕಾರಿಗಳಿಗೆ ಫೋನ್ ಮಾಡಿ ಕೂಡಲೇ ತಾತ್ಕಾಲಿಕವಾಗಿ ಲೈಟ್ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದ್ರು. ಲೈಟ್ ಅಳವಡಿಕೆ ಕಾರ್ಯ ಪಟಾಫಟ್ ಅಂತ ಶುರವಾಯ್ತು. ಮಧ್ಯಾಹ್ನದ ವೇಳೆಗೆ ವೈರಿಂಗ್ ಕೆಲಸ ಶುರು ಮಾಡಿದ್ರು. 7 ತಿಂಗಳಿನಿಂದ ದೀಪದ ಬೆಳಕಲ್ಲೇ ವ್ಯಾಪಾರ ಮಾಡ್ತಿದ್ದ ವ್ಯಾಪಾರಸ್ಥರು ಒಂದೇ ದಿನದಲ್ಲಿ ಲೈಟ್ ಬಂದಿದ್ದನ್ನ ಕಂಡು ದಂಗಾಗಿದ್ರು. ಅವರು ಬಿಗ್-3 ಕಾರ್ಯಕ್ಕೆ ಧನ್ಯವಾದ ಕೂಡ ತಿಳಿಸಿದ್ರು.

Related Video