Asianet Suvarna News Asianet Suvarna News

ಕೋಲಾರ ಕ್ಷೇತ್ರದಲ್ಲಿ ನಟ ಪ್ರಥಮ್‌ ರೌಂಡ್ಸ್: ಹೇಗಿದೆ ಜಿದ್ದಾಜಿದ್ದಿನ ಅಖಾಡದ ಚಿತ್ರಣ?

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದ್ದು, ಜಿದ್ದಾಜಿದ್ದಿನ ಕ್ಷೇತ್ರವಾದ ಕೋಲಾರದಲ್ಲಿ ನಟ ಪ್ರಥಮ್ ಗ್ರೌಂಡ್ ರಿಪೋರ್ಟ್‌ ಮಾಡಿದ್ದಾರೆ.

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಆದ ಮೇಲೆ, ಅಲ್ಲಿನ ರಾಜಕೀಯ ಚಿತ್ರಣವೇ ಬದಲಾಗಿದೆ. ಕೋಲಾರ ಅಹಿಂದ ಮತಗಳು ಹೆಚ್ಚು ಇರುವ ಕ್ಷೇತ್ರ. ಚುನಾವಣೆಯ ಬಗ್ಗೆ ಕೋಲಾರದ ಜನತೆ ನಟ ಪ್ರಥಮ್‌ ಜೊತೆ ಮಾತಾಡಿದ್ದಾರೆ. ಬಿಜೆಪಿ ಸರ್ಕಾರ ಏನು ಕೆಲಸವನ್ನು ಮಾಡಿಲ್ಲ, ಕಾಂಗ್ರೆಸ್‌ ಗೆಲ್ಲಬೇಕು. ಕಾಂಗ್ರೆಸ್‌ ಅಕ್ಕಿ ಕೊಟ್ಟಿತು, ಬಿಜೆಪಿ ಈಗ 4 ಕೆಜಿ ಮಾಡಿದೆ ಎಂದು ಅಲ್ಲಿಯ ಜನತೆ ಅಭಿಪ್ರಾಯ ಪಟ್ಟಿದ್ದಾರೆ. ಕಾಂಗ್ರೆಸ್‌ ಗೆಲ್ಲಬೇಕು ಎಂದಿದ್ದು, ಇಲ್ಲಿದೆ ಸಂಪೂರ್ಣ ಮಾಹಿತಿ.