BIG3: ಬೆಸ್ಕಾಂ ಉಗ್ರಾಣದಲ್ಲಿ ತುಕ್ಕು ಹಿಡಿಯುತ್ತಿವೆ 2 ಸಾವಿರ ಟಿಸಿಗಳು! ರೈತರಿಗೆ ಟಿಸಿ ಕೊಡಲು ಹಿಂದೇಟು!

ತುಮಕೂರು ಜಿಲ್ಲೆಯ ಬೆಸ್ಕಾಂ ಗೋದಾಮುಗಳಲ್ಲಿ ಸುಮಾರು 2 ಸಾವಿರ ವಿದ್ಯುತ್‌ ಪರಿವರ್ತಕ (ಟ್ರ್ಯಾನ್ಸ್‌ಫಾರ್ಮರ್‌) ಹಂಚಿಕೆ ಮಾಡದೇ ಇಟ್ಟು ತುಕ್ಕು ಹಿಡಿಯುವಂತೆ ಮಾಡುತ್ತಿದ್ದಾರೆ.

First Published Feb 16, 2023, 7:11 PM IST | Last Updated Feb 16, 2023, 7:11 PM IST

ಬೆಂಗಳೂರು (ಫೆ.16): ರಾಜ್ಯದಲ್ಲಿ ಸುಮಾರು 3 ಲಕ್ಷ ಕೋಟಿ ರೂ. ಬಜೆಟ್‌ ಮಂಡನೆ ಮಾಡಲಾಗುತ್ತದೆ. ಪ್ರತಿಯೊಂದು ಇಲಾಖೆಗೂ, ಯೋಜನೆಗೂ ಇಷ್ಟು ಅನುದಾನ ಮೀಸಲಿಟ್ಟಿದ್ದೇವೆ. ಇದಕ್ಕಾಗಿ ಇಷ್ಟು ಖರ್ಚು ಮಾಡಿದ್ದೇವೆ ಎಂದು ಹೇಳುತ್ತಾರೆ. ಆದರೆ, ಸರ್ಕಾರದ ಹಣ ಸೂಕ್ತ ಫಲಾನುಭವಿಗಳಿಗೆ ತಲುಪುತ್ತಿಲ್ಲ. ದೇವರು ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎಂಬ ಗಾದೆಯಂತೆ ಬೆಸ್ಕಾಂ ಹಾಗೂ ವಿದ್ಯುತ್‌ ಇಲಾಖೆ ಹೊಸ ಟ್ರಾನ್ಸ್‌ಫಾರ್ಮರ್‌ಗಳನ್ನು ಅಧಿಕಾರಿಗಳು ರೈತರಿಗೆ ಕೊಡುತ್ತಿಲ್ಲ.

ಸುಮಾರು 2 ಸಾವಿರ ವಿದ್ಯುತ್‌ ಪರಿವರ್ತಕ (ಟ್ರ್ಯಾನ್ಸ್‌ಫಾರ್ಮರ್‌) ಹಂಚಿಕೆ ಮಾಡದೇ ಗೋದಾಮಿನಲ್ಲಿ ಇಟ್ಟು ತುಕ್ಕು ಹಿಡಿಯುವಂತೆ ಮಾಡುತ್ತಿದ್ದಾರೆ. ಸರ್ಕಾರದಿಂದ ಕೋಟ್ಯಂತರ ರೂ. ಅನುದಾನ ಕೊಟ್ಟಿದ್ದರೂ ಅಧಿಕಾರಿಗಳು ರೈತರಿಗೆ ಹಂಚಿಕೆ ಮಾಡದೇ  ನಿರ್ಲಕ್ಷ್ಯವಹಿದಸಿದ್ದಾರೆ. ಇನ್ನು ಕಳೆದ ಮೂರ್ನಾಲ್ಕು ವರ್ಷದಿಂದ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಕೊಳವೆ, ಬಾವಿ ಸೇರಿದಂತೆ ವಿವಿಧೆಡೆಯಿಂದ ನೀರು ಹರಿಸಲು ವಿದ್ಯುತ್‌ ಬೇಕೇ ಬೇಕು. ಆದರೆ, ಇದಕ್ಕಾಗಿ ಟ್ರ್ಯಾನ್ಸ್‌ಫಾರ್ಮರ್‌ ಬೇಕಿದ್ದರೂ, ರೈತರಿಗೆ ಕೊಡುತ್ತಿಲ್ಲ. ಸುಮಾರು 8 ತಿಂಗಳ ಹಿಂದೆಯೇ ಟಿಸಿಗಳು ಬಂದಿದ್ದು, ಇನ್ನು ಎರಡು ತಿಂಗಳು ಕಳೆದರೆ ಟಿಸಿ ಕಾರ್ಯಕ್ರಮತೆ ನಿಂತುಹೋಗಲಿದೆ.