BIG 3: ಕೆಂಭಾವಿಯಲ್ಲಿ ರಸ್ತೆಯಲ್ಲೇ ಪೋಸ್ಟ್‌ ಮಾರ್ಟಂ: ಸ್ವಯಂಪ್ರೇರಿತ ದೂರು ದಾಖಲಿಸಿದ ಲೋಕಾಯುಕ್ತ

Big 3 Kembhavi Hospital Story: ಆಸ್ಪತ್ರೆಯಲ್ಲಿ ಶವಗಾರವಿಲ್ಲದಿರುವುದರಿಂದ ಹೆಣವನ್ನ ರಸ್ತೆ ಬದಿಯಲ್ಲಿಯೇ ಪೋಸ್ಟ್ ಮಾರ್ಟಂ ಮಾಡಿದ್ದರ ಬಗ್ಗೆ ಬಿಗ್‌ 3 ವರದಿ  ಮಾಡಿತ್ತು

Share this Video
  • FB
  • Linkdin
  • Whatsapp

ಯಾದಗಿರಿ (ಸೆ. 16): ಆಸ್ಪತ್ರೆಯಲ್ಲಿ ಶವಗಾರವಿಲ್ಲದಿರುವುದರಿಂದ ಹೆಣವನ್ನ ರಸ್ತೆ ಬದಿಯಲ್ಲಿಯೇ ಪೋಸ್ಟ್ ಮಾರ್ಟಂ ಮಾಡಿದ್ದರ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಿಗ್‌ 3 ವರದಿ ಮಾಡಿತ್ತು. ಕೋಟಿ ಕೋಟಿ ಸುರಿದು ಕಟ್ಟಿದ್ದ ಆಸ್ಪತ್ರೆಯಲ್ಲಿ ಶವಗಾರವಿಲ್ಲದೇ ಮರಣೋತ್ತರ ಪರೀಕ್ಷೆ ಮಾಡಲು ಆರೋಗ್ಯ ಸಿಬ್ಬಂದಿಗಳು ಹೆಣಗಾಡೋ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಬಿಗ್ 3 ಸುದ್ದಿ ಪ್ರಸಾರವಾದ ಬಳಿಕ ಯಾದಗಿರಿ ಮತ್ತು ಶಹಾಪುರ ಶಾಸಕರ ಬೆಂಬಲಿಗರು ಧಮ್ಕಿ ಕೂಡ ಹಾಕಿದ್ದರು. ಕಾರ್ಯಕ್ರಮ ಪ್ರಸಾರದ ವೇಳೆ ಕೂಡ ಫೋನಿನಲ್ಲಿ ಧಮ್ಕಿ ಹಾಕಲಾಗಿತ್ತು.
ಶವಾಗಾರ ಇಲ್ಲದ ಕೆಂಭಾವಿಯ ಆಸ್ಪತ್ರೆಗಳಿಗೆ ಜಿಲ್ಲಾ ನ್ಯಾಯಾಧೀಶರಾದ ಸಾಹೀಲ್‌ ಅಹಮದ್‌ ಕೂಡ ಭೇಟಿ ನೀಡಿದ್ದರು. ಈಗ ಬೆನ್ನಲ್ಲೇ ಲೋಕಾಯುಕ್ತ ಈಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ಕುರಿತ ವರದಿ ಇಲ್ಲಿದೆ 

BIG 3: ರಾಣೆಬೆನ್ನೂರಿನ ಅನಾಥ ಅಂಗನವಾಡಿ: ಬಡವರ ಮಕ್ಕಳು ಮಾಡಿದ ಪಾಪವೇನು?

Related Video