BIG 3: ಕೆಂಭಾವಿ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ನ್ಯಾಯಾಧೀಶರ ಭೇಟಿ, ಸಿಬ್ಬಂದಿಗೆ ಕ್ಲಾಸ್!

Big 3 Yadagiri Hospital Story: ಕೋಟಿ ಕೋಟಿ ಸುರಿದು ಕಟ್ಟಿದ್ದಾ ಆಸ್ಪತ್ರೆಯಲ್ಲಿ ಶವಗಾರ ಇಲ್ಲದೇ ಇರುವ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಿಗ್‌ 3 ವರದಿ  ಮಾಡಿತ್ತು
 

Share this Video
  • FB
  • Linkdin
  • Whatsapp

ಯಾದಗಿರಿ (ಸೆ. 13): ಕೋಟಿ ಕೋಟಿ ಸುರಿದು ಕಟ್ಟಿದ್ದಾ ಆಸ್ಪತ್ರೆಯಲ್ಲಿ ಶವಗಾರ ಇಲ್ಲದೇ ಇರುವ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಬಿಗ್‌ 3 ವರದಿ ಮಾಡಿತ್ತು. ಆಸ್ಪತ್ರೆಯಲ್ಲಿ ಶವಗಾರವಿಲ್ಲದಿರುವುದರಿಂದ ಹೆಣವನ್ನ ರಸ್ತೆ ಬದಿಯಲ್ಲಿಯೇ ಪೋಸ್ಟ್ ಮಾರ್ಟಂ ಮಾಡುವ ಪರಿಸ್ಥಿತಿ ಬಂದಿದೆ. ಮರಣೋತ್ತರ ಪರೀಕ್ಷೆ ಮಾಡಲು ರೂಂ ಇಲ್ಲದೇ ಆರೋಗ್ಯ ಸಿಬ್ಬಂದಿಗಳು ಹೆಣಗಾಡೋ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಬಿಗ್ 3 ಸುದ್ದಿ ಪ್ರಸಾರವಾದ ಬಳಿಕ ಯಾದಗಿರಿ ಮತ್ತು ಶಹಾಪುರ ಶಾಸಕರ ಬೆಂಬಲಿಗರು ಧಮ್ಕಿ ಹಾಕಿದ್ದರು. ಕಾರ್ಯಕ್ರಮ ಪ್ರಸಾರದ ವೇಳೆ ಕೂಡ ಫೋನಿನಲ್ಲಿ ಧಮ್ಕಿ ಹಾಕಲಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ ಶವಾಗಾರ ಇಲ್ಲದ ಕೆಂಭಾವಿಯ ಆಸ್ಪತ್ರೆಗಳಿಗೆ ಜಿಲ್ಲಾ ನ್ಯಾಯಾಧೀಶರಾದ ಸಾಹೀಲ್‌ ಅಹಮದ್‌ ಭೇಟಿ ನೀಡಿದ್ದಾರೆ. ಅಲ್ಲದೇ ಡಿಎಚ್‌ಓ ಡಾ. ಗುರುರಾಜ್‌ ಹೀರೆಗೌಡರ್‌, ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ 

Yadagiri : ಶವಾಗಾರವಿಲ್ಲದ ಬಗ್ಗೆ Big 3 ವರದಿಯಲ್ಲಿ ಪ್ರಶ್ನಿಸಿದ್ದಕ್ಕೆ ಶಾಸಕರ ಚೇಲಾಗಳಿಂದ ಧಮ್ಕಿ!

Related Video