ಬಿಗ್‌ 3 ವರದಿಗೆ ಸರ್ಕಾರ ಅಲರ್ಟ್.. ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಸಿಕ್ತು ಪರಿಹಾರ !

BIG 3 ಕೈ ಇಟ್ರೆ ಆಗದೇ ಇರೋ ಕೆಲಸ ಇಲ್ಲ. ಅದು ಎಷ್ಟೇ ಕಷ್ಟ ಇರಲಿ ಬಡವರ ಧ್ವನಿಯಾಗಿ ನಿಲ್ಲುತ್ತೆ. ಯಾರ ಪ್ರಭಾವಕ್ಕೂ ಮಣಿಯಲ್ಲ. ಬಿಗ್ 3 ಸುಮ್ಮನೆ ಮಾತಾಡಲ್ಲ, ಮಾಡಿ ತೋರಿಸುತ್ತೆ. ಹಾಗಾದ್ರೆ ಮಾಡಿದ್ದಾದ್ರೂ ಏನು.. ನೋಡಿ ಈ ಇಂಪ್ಯಾಕ್ಟ್ ವರದಿಯಲ್ಲಿ..
 

Share this Video
  • FB
  • Linkdin
  • Whatsapp

ಕೊರೊನಾ ವೇಳೆ ಚಾಮರಾಜನಗರದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದ ಬಗ್ಗೆ ನಿಮಗೆಲ್ಲ ಗೊತ್ತೆ ಇದೆ. ಮಹಾಮಾರಿ ಕೊರೊನಾ ಸಮಯದಲ್ಲಿ ಬಳ್ಳಾರಿಯ(Bellary) ಸರ್ಕಾರಿ ವಿಮ್ಸ್ ಆಸ್ಪತ್ರೆಯಲ್ಲಿ(Vims Hospital) ಕರೆಂಟ್(Current) ಸಪ್ಲೈ ಕಟ್ ಆಗಿ ಆಕ್ಸಿಜನ್ ಸಿಗದೇ ಮೌಲಾ ಹುಸೇನ್, ಚಿಟ್ಟೆಮ್ಮ ಸಾವನ್ನಪ್ಪಿದ್ರು. ಈ ಘಟನೆ ಕೂಡ ದೊಡ್ಡ ಮಟ್ಟದಲ್ಲಿ ಆಕ್ರೋಶ ಹುಟ್ಟು ಹಾಕಿತ್ತು. ಇನ್ನೂ ಪರಿಹಾರ ಕೊಟ್ಟಿಲ್ವಾ ಅಂತೇಳಿ ಬಿಗ್ 3ಯಲ್ಲಿ(Big 3) ಆಗಸ್ಟ್ 20ಕ್ಕೆ ಗರಂ ಆಗಿಯೇ ವರದಿ ಪ್ರಸಾರ ಮಾಡಿದ್ವಿ. ಇನ್ನೂ ಈ ಸುದ್ದಿಯನ್ನ ಸಿಎಂ ಸಿದ್ದರಾಮಯ್ಯ ಅವ್ರ ಮಾಧ್ಯಮ ಸಲಹೆಗಾರರಾದ ಪ್ರಭಾಕರ್ ಗಮನಕ್ಕೂ ತಂದ್ವಿ. ತಕ್ಷಣವೇ ಅಲರ್ಟ್ ಆದ ಪ್ರಭಾಕರ್ ಅವ್ರು ಸಮಸ್ಯೆ ಬಗೆ ಹರಿಸೋಣ ಅಂತ ಮೆಸೇಜ್ ಮಾಡಿದ್ರು. ತಕ್ಷಣವೇ ಕಾರ್ಯಪ್ರವೃತ್ತರಾಗಿ ಸಿಎಂ ಪರಿಹಾರ ನಿಧಿಯಿಂದ ಹಣ ಬಿಡುಗಡೆ ಮಾಡಿದ್ರು. ಮೃತ ಮೌಲಾ ಹುಸೇನ್ ಕುಟುಂಬ ಮತ್ತು ಮೃತ ಮಹಿಳೆ ಚಿಟ್ಟೆಮ್ಮ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಬಿಡುಗಡೆಯಾಗಿದೆ. ಇನ್ನು ಕುಟುಂಬಸ್ಥರ ಕೈಗೆ ಹಣ ಸೇರೋದೊಂದೆ ಬಾಕಿಯಿದ್ದು, ಹಣ ಬಿಡುಗಡೆ ಸುದ್ದಿ ಕೇಳಿ ಆ ಎರಡು ಕುಟುಂಬ ನಿಟ್ಟುಸಿರು ಬಿಟ್ಟಿದೆ.

ಇದನ್ನೂ ವೀಕ್ಷಿಸಿ: 'ಹೈ' ಲೆವೆಲ್ ಮೀಟಿಂಗ್‌ಗೆ ಬಿಜೆಪಿ ರೆಬೆಲ್ಸ್ ಚಕ್ಕರ್ ಹಾಕಿದ್ದೇಕೆ..? ನಾಲ್ಕು ಗೋಡೆಗಳ ಮಧ್ಯೆ ಅಸಲಿಗೆ ನಡೆದದ್ದೇನು..?

Related Video