Asianet Suvarna News Asianet Suvarna News

Big 3 Hero: ಚಿಕ್ಕಬಳ್ಳಾಪುರದ ವೈದ್ಯ ದಂಪತಿ & ಮಂಗಳೂರಿನ ಕ್ರಿಯೇಟಿವ್ ಆರ್ಟಿಸ್ಟ್ ರಾಜ್ ಕುಮಾರ್

ಚಿಕ್ಕಬಳ್ಳಾಪುರ ನಗರದ ಮಾನಸ ನರ್ಸಿಂಗ್ ಹೋಂನ ಡಾ. ಮಧುಕರ್  ಹಾಗೂ ಡಾ. ಸುಷ್ಮಾ ದಂಪತಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಅನ್ನದಾಸೋಹ ಮಾಡುತ್ತಿದ್ದಾರೆ.ಮಂಗಳೂರಿನ ರಾಜ್ ಕುಮಾರ್  ಬೋಲ್ಟ್, ಬಾಲ್ ಬೇರಿಂಗ್, ಇಂಜಿನ್ ಫಿಟ್ಟಿಂಗ್ಸ್ ಹೀಗೆ ಬಳಕೆಯಾಗಿ ಮೂಲೆ ಸೇರಿದ ನಿರುಪಯುಕ್ತ ವಸ್ತುಗಳಿಂದ ಕಲಾಕೃತಿ ರಚಿಸ್ತಾರೆ.
 

ಚಿಕ್ಕಬಳ್ಳಾಪುರ ನಗರದಲ್ಲಿ ವೈದ್ಯ ದಂಪತಿ ಸರ್ಕಾರಿ ಆಸ್ಪತ್ರೆ ಬಳಿ ಪ್ರತಿನಿತ್ಯ ಅನ್ನದಾಸೋಹ ಕಾರ್ಯಕ್ರಮ ಮಾಡುತ್ತಿದ್ದು, ಈ ದಂಪತಿಯ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಬರಿ ಆಸ್ಪತ್ರೆಗೆ ಬರುವ ಬಡವರಿಗೆ ಮಾತ್ರ ಅನ್ನದಾಸೋಹ ಮಾಡಿ ಸುಮ್ಮನಾಗದ ಈ ದಂಪತಿ, ವೃದ್ಧರಿರೂ ಹಾಗೂ ವಿಕಲಚೇತನರಿಗೂ ಕೂಡ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಪ್ರಾಯೋಗಿಕವಾಗಿ ಎರಡು ಕಾಲೊನಿಗಳಲ್ಲಿ ಸರ್ವೆ ನಡೆಸಿ ಊಟ ವಿತರಣೆಯನ್ನು ಮಾಡುತ್ತಿದ್ದಾರೆ. ಇದುವರೆಗೂ ಒಂದು ಲಕ್ಷ ಜನರಿಗೆ ಊಟ ನೀಡಿರುವ ತೃಪ್ತಿ ಇದ್ದು ಈ ಸೇವೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಹಾಗೆ ಮಂಗಳೂರಿನ ರಾಜ್ ಕುಮಾರ್ ಅವರು, ಉಪಯೋಗಿಸಿದ ಬಳಿಕ  ಗುಜಿರಿಗೋ ಅಥವಾ ಯಾವುದೋ ಮೂಲೆಗೋ ಎಸೆಯೋ ವಸ್ತುಗಳಲ್ಲಿ ಹೊಸ ಕಲ್ಪನೆ ಬಿತ್ತುತ್ತಾರೆ. 

Managaluru: ಅಷ್ಟಮಂಗಲ ಪ್ರಶ್ನೆಯಲ್ಲಿ ನಡೆದ ಪವಾಡ : ಪುರಾತನ ಶಿವ ದೇವ ...

Video Top Stories