
BIG 3: ಕಣ್ಣಿಲ್ಲದವರನ್ನು ಕತ್ತಲಕೂಪಕ್ಕೆ ತಳ್ಳಿದ್ರು: ದಿವ್ಯಾಂಗರಿಗೆ ಹಕ್ಕುಪತ್ರ ಯಾವಾಗ?
ಕಣ್ಣು ಇಲ್ಲದವರ ಬದುಕು ಮತ್ತಷ್ಟು ಇಲ್ಲಿ ಕತ್ತಲಾಗಿದೆ. ಇದು ಹೊರ ಜಗತ್ತೇ ನೋಡದ ದಿವ್ಯಾಂಗರ ಕಥೆ. ಮನೆ ಬಾಡಿಗೆ ಕಟ್ಟಲು ದಿವ್ಯಾಂಗರು ಪರದಾಟ ನಡೆಸಿದ್ದಾರೆ.
25 ದಿವ್ಯಾಂಗ ಕುಟುಂಬಗಳಿಗೆ ಮುಖ್ಯಮಂತ್ರಿ ಗ್ರಾಮೀಣ ನಿವೇಶನ ಯೋಜನೆ ಅಡಿಯಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ನಿವೇಶನ ನೀಡುವಂತೆ ಆದೇಶ ಮಾಡುತ್ತಾರೆ. ಇದಾಗಿ 5 ವರ್ಷ ಕಳಿತಾ ಬಂದ್ರು ದಿವ್ಯಾಂಗರಿಗೆ ಹಕ್ಕು ಪತ್ರ ಸಿಕ್ಕಿಲ್ಲ. ಈಗಾಗಲೆ ಸರ್ಕಾರ 25 ಕುಟುಂಬಗಳಿಗೆ ನಿವೇಶನ ಕೊಡಲು ಯಲಹಂಕ ತಾಲೂಕು ಬ್ಯಾಲಕೇರೆ ಗ್ರಾಮದ ಸರ್ವೆ ನಂಬರ್ 77ರಲ್ಲಿ 22ಗುಂಟೆ ಜಮೀನು ಮಂಜುರು ಮಾಡಲಾಗಿದೆ. ಇಷ್ಟು ಇದ್ದರೂ ಹಕ್ಕು ಪತ್ರವನ್ನು ಕೊಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ದಿವ್ಯಾಂಗರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.