ಮೈಸೂರು ಸಮೀಪ ಪ್ರಧಾನಿ ನರೇಂದ್ರ ಮೋದಿ ಸಹೋದರನ ಕಾರು ಅಪಘಾತ!
ಪ್ರಧಾನಿ ನರೇಂದ್ರ ಮೋದಿ ಸಹೋದರ ಸಂಚರಿಸುತ್ತಿದ್ದ ಕಾರು ಮೈಸೂರಿನ ಬಳಿ ಅಪಘಾತಕ್ಕೀಡಾಗಿದೆ. ಕಾರಿನಲ್ಲಿ ಮೋದಿ ಸಹೋದರ, ಅವರ ಪುತ್ರ ಹಾಗೂ ಸೊಸೆ ಸಂಚರಿಸುತ್ತಿದ್ದರು.
ಮೈಸೂರು(ಡಿ.27): ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕಾರು ಅಪಘಾತಕ್ಕೀಡಾಗಿದೆ. ಪ್ರಹ್ಲಾದ್ ಮೋದಿ ಕುಟುಂಬ ಸಮೇತವಾಗಿ ಸಂಚರಿಸುತ್ತಿದ್ದ ಕಾರು ಮೈಸೂರಿನ ಕಡಕೊಳ ಬಳಿ ಅಪಘಾತ ಅಪಘಾತಕ್ಕೀಡಾಗಿದೆ. ಪ್ರಹ್ಲಾದ್ ಮೋದಿ, ಪುತ್ರ, ಸೊಸೆಗೆ ಗಾಯಗಳಾಗಿವೆ. ಅದೃಷ್ಠವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ಬಂಡೀಪುರಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪ್ರಹ್ಲಾದ್ ಮೋದಿ ಕಾರು ಜಖಂ ಗೊಂಡಿದೆ.
ಕಾರಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ. ಕಾರಿನಲ್ಲಿದ್ ಪ್ರಹ್ಲಾದ್ ಮೋದಿ(prahlad modi) ಗಾಯಗೊಂಡಿದ್ದಾರೆ. ಇನ್ನು ಪುತ್ರ ಹಾಗೂ ಸೊಸೆಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಕಾರಿನಲ್ಲಿದ್ದ ಏರ್‌ಬ್ಯಾಗ್‌ನಿಂದ ಹೆಚ್ಚಿನ ಅಪಾಯವಿಲ್ಲದೆ ಪಾರಾಗಿದ್ದಾರೆ. ತಕ್ಷಣವೇ ಪ್ರಹ್ಲಾದ್ ಮೋದಿ ಹಾಗೂ ಕುಟುಂಬಸ್ಥರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಎಸ್ಪಿ ಸೀಮಾ ಲಾಟ್ಕರ್, ಡಿವೈಎಸ್ಪಿ ಗೋವಿಂದರಾಜು ಭೇಟಿ ಪರಿಶೀಲನೆ ನಡೆಸಿದ್ದಾರೆ.
ನಡುಗಿತು ಜೈಪುರ: ಠಾಣೆ ಎದುರು ಧರಣಿ ಕುಳಿತ ಮೋದಿ ಸಹೋದರ!
ಮಧ್ಯಾಹ್ನ 1.30ರ ಸುಮಾರಿಗೆ ಅಪಘಾತ(Car Accident) ಸಂಭವಿಸಿದೆ. ಪ್ರಹ್ಲಾದ್ ಮೋದಿ(Pm Modi Brother) ಸೊಸೆ ಗಾಯ ತೀವ್ರವಾಗಿರುವ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೊಮ್ಮಗನ ಕಾಲಿಗೆ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ್ ಟ್ವೀಟ್ ಮಾಡಿದ್ದಾರೆ. ಮೋದಿ ಸಹೋದರ ಪ್ರಹ್ಲಾದ್ ಮೋದಿ ಕಾರು ಅಪಘಾತವಾಗಿದಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದಿದ್ದಾರೆ.
ಪ್ರಹ್ಲಾದ್ ಮೋದಿ
ಪ್ರಧಾನಿ ನರೇಂದ್ರ ಮೋದಿಯ ಕಿರಿಯ ಸಹೋದರ ಪ್ರಹ್ಲಾದ್ ಮೋದಿ, ಗುಜರಾತ್‌ನಲ್ಲಿ ನ್ಯಾಯ ಬೆಲೆ ಅಂಗಡಿ ನಡೆಸುತ್ತಿದ್ದರು. 69 ವರ್ಷದ ಪ್ರಹ್ಲಾದ್ ಮೋದಿ ಸದ್ಯ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ. ಆದರೆ ಗುಜರಾತ್ ನ್ಯಾಯಬೆಲೆ ಅಂಗಡಿ ಒಕ್ಕೂಟಗಳ ಅಧ್ಯಕ್ಷರಾಗಿದ್ದಾರೆ. ಇಷ್ಟೇ ಅಲ್ಲ ಅಖಿಲ ಭಾರತ ನ್ಯಾಯಬೆಲೆ ಅಂಗಡಿ ಡೀಲರ್ಸ್ ಫೆಡರೇಶನ್ ಉಪಾಧ್ಯಕ್ಷರಾಗಿರುವ ಪ್ರಹ್ಲಾದ್ ಮೋದಿ, ಈಗಾಗಲೇ ಹಲವು ಹೋರಾಟಗಳ ನೇತೃತ್ವವಹಿಸಿದ್ದಾರೆ.
ನ್ಯಾಯಬೆಲೆ ಅಂಗಡಿ ನಡೆಸವವರಿಗೆ ಅಗುತ್ತಿರುವ ಅನ್ಯಾಯ ಸಮಸ್ಯೆಗಳ ಕುರಿತು ಗುಜರಾತ್ ಸರ್ಕಾರದ ವಿರುದ್ದ ಅಂದರೆ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗಲೇ ಹೋರಾಟ ನಡೆಸಿದ್ದರು. ಈ ಕುರಿತು ನಿಯೋಗ ಜೊತೆ ನರೇಂದ್ರ ಮೋದಿ ಬೇಟಿಯಾಗಿ ಹಲವು ಸುತ್ತಿನ ಮಾತುಕತೆ ನಡೆಸಿದ್ದರು.
ದಾಮೋದರ್ ದಾಸ್ ಹಾಗೂ ಹೀರಾಬೆನ್ ಮೋದಿಯ ನಾಲ್ವರು ಮಕ್ಕಳಲ್ಲಿ ಸೋಮಾಭಾಯಿ ಮೋದಿ ಹಿರಿಯರಾಗಿದ್ದಾರೆ. 2ನೇ ಪುತ್ರ ಅಮೃತ ಮೋದಿ, ಇನ್ನು ಮೂರನೇಯವರು ಪ್ರಧಾನಿ ನರೇಂದ್ರ ಮೋದಿ, ನಾಲ್ಕನೇಯವರು ಪ್ರಹ್ಲಾದ್ ಮೋದಿ.