Asianet Suvarna News Asianet Suvarna News

Bengaluru: ಟ್ರಾಫಿಕ್‌ ಪೊಲೀಸರ ಶ್ರಮದಾನ, ವಾಹನ ಸವಾರರಿಗೆ ವರದಾನ!

ಬೆಂಗಳೂರಿನ ಸಂಚಾರಿ ವಿಭಾಗದ ಪೊಲೀಸರು ಕಬ್ಬನ್‌ ಪಾರ್ಕ್‌ ಬಳಿ ಬಿದ್ದ ರಸ್ತೆಗುಂಡಿಯನ್ನು ತಾವೇ ಜಲ್ಲಿಕಲ್ಲು, ಮರಳು ಮಿಶ್ರಣ ಮಾಡಿ ಮುಚ್ಚಿದ್ದಾರೆ.

ಬೆಂಗಳೂರು (ಜು.17): ಬೆಂಗಳೂರಿನಲ್ಲಿ ಇನ್ನೇನು ಮಳೆಗಾಲ ಆರಂಭವಾಗಿದ್ದು, ರಸ್ತೆಗುಂಡಿಗಳ ಹಾವಳಿಯೂ ಹೆಚ್ಚಾಗಲಿದೆ. ಈಗಾಗಲೇ ಬೆಂಗಳೂರಿನ ವಿವಿಧ ರಸ್ತೆಗಳಲ್ಲಿ ರಸ್ತೆ ಗುಂಡಿಗಳು ಬಾಯಿತೆರೆದುಕೊಂಡಿದ್ದು, ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯತನ ಮತ್ತೆ ಮುಂದುವರೆದಿದೆ. ಹೀಗಾಗಿ, ಕಬ್ಬನ್‌ ಪಾರ್ಕ್‌ನ ಪ್ರೆಸ್‌ಕ್ಲಬ್‌ ಬಳಿಯ ಸರ್ಕಲ್‌ನಲ್ಲಿ ಉಂಟಾಗಿದ್ದ ಸುಮಾರು 6 ಮೀಟರ್‌ ಉದ್ದದ ರಸ್ತೆ ಗುಂಡಿಯನ್ನು ಟ್ರಾಫಿಕ್‌ ಪೊಲೀಸರೇ ಕಾಂಕ್ರೀಟ್‌ ಹಾಕಿ ಮುಚ್ಚುವ ಮೂಲಕ ವಾಹನ ಸವಾರರಿಗೆ ಸುರಕ್ಷಿತ ಸಂಚಾರಕ್ಕೆ ನೆರವಾಗಿದ್ದಾರೆ. ಗುಂಡಿ ಬಿದ್ದ ರಸ್ತೆಗೆ ಟ್ರಾಫಿಕ್ ಪೋಲಿಸರು ಕಾಂಕ್ರೀಟ್ ಹಾಕಿಸಿದ್ದಾರೆ.

ಕಬ್ಬನ್ ಪಾರ್ಕ್ ಟ್ರಾಫಿಕ್ ‌ಪೋಲಿಸರಿಂದ ಗುಂಡಿ ಮುಚ್ಚುವ ಕಾರ್ಯ ಮಾಡಲಾಗಿದೆ. ವಾಹನಗಳ ‌ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸ್ವತಃ ತಾವೇ ಸಿಮೆಂಟ್, ಜೆಲ್ಲಿ ಮಿಕ್ಸ್ ಮಾಡಿ ರಸ್ತೆ ಗುಂಡಿಯನ್ನು ಮುಚ್ಚಿದ್ದಾರೆ. ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ  ಸಂಚಾರ ಮಾಡುತ್ತವೆ. ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿದ್ದು, ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ರಸ್ತೆ ಗುಂಡಿ ಮುಚ್ಚಿರಲಿಲ್ಲ. ಆದ್ದರಿಂದ ವಾಹನ ಸವಾರರ ಸಂಕಷ್ಟ ನೋಡಲಾರದೇ ಪೊಲೀಸರೇ ಶ್ರಮದಾನದ ಮೂಲಕ ರಸ್ತೆ ಗುಂಡಿ ಮುಚ್ಚಿ ಮಾದರಿ ಆಗಿದ್ದಾರೆ.

Video Top Stories