Asianet Suvarna News Asianet Suvarna News

ಗಾಳಿಪಟ ಹಾರಿಸಿ ಇಂದು ಬಾನಿಗೆಲ್ಲಾ ಹಬ್ಬ ಮಾಡಿದ ಸೇಂಟ್ ಜೋಸೆಫ್ ಶಾಲೆ ಮಕ್ಕಳು

ಕಂಪ್ಯೂಟರ್ , ಮೊಬೈಲ್,ವಿಡಿಯೋ ಗೇಮ್ ಬಂದ ಮೇಲೆ ಗ್ರಾಮೀಣ ಸೋಗಡಿನ ಆಟಗಳು ಇತ್ತೀಚಿಗೆ ಕಣ್ಮರೆಯಾಗುತ್ತಿವೆ. ಹೌದು,ಮತ್ತೆ ಅವುಗಳನ್ನ ಮಕ್ಕಳಿಗೆ ನೆನಪಿಸುವ ಕೆಲಸವನ್ನ ಬೆಂಗಳೂರಿನ ಸೆಂಟ್ ಜೋಸೆಫ್ ಶಾಲೆ ಮಾಡಿದೆ.ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿಗಳು ಗಾಳಿಪಟ ಉತ್ಸವ ಹಾಗೂ ಮಕರ ಸಂಕ್ರಾಂತಿ ಹಬ್ಬವನ್ನ ಆಚರಿಸುವ ಮೂಲಕ ಮಕ್ಕಳು ಸಂತಸ ಪಟ್ರು.

ಬೆಂಗಳೂರು, [ಜ.14]: ಕಂಪ್ಯೂಟರ್ , ಮೊಬೈಲ್,ವಿಡಿಯೋ ಗೇಮ್ ಬಂದ ಮೇಲೆ ಗ್ರಾಮೀಣ ಸೋಗಡಿನ ಆಟಗಳು ಇತ್ತೀಚಿಗೆ ಕಣ್ಮರೆಯಾಗುತ್ತಿವೆ. ಹೌದು,ಮತ್ತೆ ಅವುಗಳನ್ನ ಮಕ್ಕಳಿಗೆ ನೆನಪಿಸುವ ಕೆಲಸವನ್ನ ಬೆಂಗಳೂರಿನ ಸೆಂಟ್ ಜೋಸೆಫ್ ಶಾಲೆ ಮಾಡಿದೆ.ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿಗಳು ಗಾಳಿಪಟ ಉತ್ಸವ ಹಾಗೂ ಮಕರ ಸಂಕ್ರಾಂತಿ ಹಬ್ಬವನ್ನ ಆಚರಿಸುವ ಮೂಲಕ ಮಕ್ಕಳು ಸಂತಸ ಪಟ್ರು.

ಮಕರ ಸಂಕ್ರಾಂತಿಗೆ ಭರ್ಜರಿ ವಹಿವಾಟು! ಹೂ ಬೆಲೆ ಇಳಿಕೆ

ಕಳೆದ ಐದು ವರ್ಷಗಳಿಂದ ಶಾಲೆಯಲ್ಲಿ ಗಾಳಿಪಟ ಉತ್ಸವ ಹಾಗೂ ಮಕರ ಸಂಕ್ರಾಂತಿ ಹಬ್ಬವನ್ನ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ಸವದಲ್ಲಿ ಭಾಗವಹಿಸಿದ್ದರು. ಇದರ ಜೊತೆಗೆ ಶಾಲೆಯ ಸಿಬ್ಬಂದಿ ಹಾಗೂ ಅಧ್ಯಾಪಕರು ಕೂಡ ಮಕ್ಕಳ ಜೊತೆ ಗಾಳಿಪಟ ಹಾರಿಸಿ ಸಂತಸ ಪಟ್ರು.

Video Top Stories