Asianet Suvarna News Asianet Suvarna News

ಹೊಲಸು ರಾಜಕೀಯ, ಬೇಸತ್ತ ಬೆಂಗಳೂರಿಗರ ಪ್ರತಿಧ್ವನಿ

Jul 22, 2019, 6:43 PM IST

ಕಳೆದ 17 ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ನಾಟಕದಿಂದ ಜನ ರೋಸಿ ಹೋಗಿದ್ದಾರೆ. ಶಾಸಕರ ಸಾಮೂಹಿಕ ರಾಜೀನಾಮೆಯಿಂದ ಶುರುವಾದ ಈ ಬೆಳವಣಿಗೆ, ಬಂಡಾಯ- ಮುಂಬೈ- ವಿಶ್ವಾಸಮತ- ಹೀಗೆ ಗಿರಕಿ ಹೊಡೆಯುತ್ತಲೇ ಇದೆ. ಇವತ್ತು ಮುಗಿಯುತ್ತೆ, ನಾಳೆ ಮುಗಿಯುತ್ತೆ ಎಂದು ‘ಹೈಪರ್’ ಕುತೂಹಲದಿಂದ ಕಾಯುತ್ತಿರುವವರಿಗೆ ಸಿಕ್ಕಿದ್ದು ಬರೀ ನಿರಾಶೆಯಾದರೆ, ಇನ್ನು ಕೆಲವರಿಗೆ ಇದೆಲ್ಲಾ ಒಳ್ಳೆ ತಮಾಷೆ! ಏಷ್ಯಾನೆಟ್ ನ್ಯೂಸೇಬಲ್ ಜೊತೆ ಮಾತನಾಡಿದ ಬೆಂಗಳೂರಿಗರು, ರಾಜಕೀಯ ವಿದ್ಯಮಾನಗಳ ಬಗ್ಗೆ ಬೇಸರ ಹೊರಹಾಕಿದ್ದಾರೆ. ಏನ್ ಹೇಳಿದ್ದಾರೆ ನೀವೇ ಕೇಳಿ....