Asianet Suvarna News Asianet Suvarna News

ಸಾರ್ವಜನಿಕ ರಸ್ತೆಯೇ ಪಬ್‌ ಪಾರ್ಕಿಂಗ್! ಕಣ್ಮುಚ್ಚಿ ಕುಳಿತ ಪೊಲೀಸರು

Aug 22, 2021, 12:20 PM IST

ಬೆಂಗಳೂರು (ಆ.22):  ಬನ್ನೇರುಘಟ್ಟ ರಸ್ತೆಯ ಉರು ರೆಸ್ಟೋರೆಂಟ್ ಬಳಿ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುತ್ತಿದ್ದು ಇದರಿಂದ ಯಾವಾಗಲೂ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ವಾಹನ ಸವಾರರ ಪರದಾಟ ಸಾರ್ವಜನಿಕ ರಸ್ತೆ ದುರ್ಬಳಕೆಯಾಗುತ್ತಿದ್ದರೂ ಪೊಲೀಸರು ಮಾತ್ರ ಕ್ರಮ ಕೈಗೊಂಡಿಲ್ಲ. 

ಟ್ರಾಫಿಕ್ ರೂಲ್ಸ್: ದಂಡ ವಸೂಲಿ ಮಾಡುವುದಿಲ್ಲ ಎಂಬ ಸುದ್ದಿ ಸುಳ್ಳು

ಯಾವುದೇ ಪರ್ಯಾಯಗಳಿಲ್ಲದ ಬನ್ನೇರುಘಟ್ಟ ರಸ್ತೆ ಬೆಂಗಳೂರಿನ ಅತೀ ಬ್ಯುಸಿ ರಸ್ತೆಗಳಲ್ಲಿ ಒಂದು. ಮೊದಲೇ ಸಿಗ್ನಲ್‌ಗಳಲ್ಲಿ ಉದ್ದುದ್ದ ವಾಹನಗಳ ಸಾಲು. ಈ ರಸ್ತೆಯಲ್ಲಿ ಸಂಚರಿಸುವುದೆಂದರೆ ವಾಹನ ಸವಾರರಿಗೆ ತಲೆನೋವು. ಇವುಗಳು ಸಾಲದು ಎಂಬಂತೆ, ಜೆ.ಡಿ. ಮರ ಜಂಕ್ಷನ್‌ನಲ್ಲಿರೋ ಪಬ್‌ವೊಂದು  ಸಮಸ್ಯೆಗಳನ್ನು ಮತ್ತಷ್ಟು ಸೃಷ್ಟಿಸಿದೆ..

ಪಬ್‌ ಮಾಲೀಕರು ಸಾರ್ವಜನಿಕ ರಸ್ತೆಯನ್ನೇ ಪಾರ್ಕಿಂಗ್‌ಗೆ ಬಳಸುತ್ತಿದ್ದು, ವಾಹನ ಸವಾರರ ಪರದಾಟವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಸಾರ್ವಜನಿಕ ರಸ್ತೆ ದುರ್ಬಳಕೆಯಾಗುತ್ತಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ.