Asianet Suvarna News Asianet Suvarna News

ಟ್ರಾಫಿಕ್ ರೂಲ್ಸ್: ದಂಡ ವಸೂಲಿ ಮಾಡುವುದಿಲ್ಲ ಎಂಬ ಸುದ್ದಿ ಸುಳ್ಳು

* ಟ್ರಾಫಿಕ್ ರೂಲ್ಸ್: ದಂಡ ವಸೂಲಿ ಮಾಡುವುದಿಲ್ಲ ಎಂಬ ಸುದ್ದಿ ಸುಳ್ಳು
* ಸ್ಪಷ್ಟನೆ ಕೊಟ್ಟ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ
* ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ ದಂಡ ವಸೂಲಿ ಮಾಡುವುದಿಲ್ಲ ಎಂದು ಹಬ್ಬಿದ್ದ ಸುದ್ದಿ 

traffic police joint commissioner ravikanthe-gowda Gives clarification about traffic fine rbj
Author
Bengaluru, First Published Aug 10, 2021, 5:48 PM IST
  • Facebook
  • Twitter
  • Whatsapp

ಬೆಂಗಳೂರು, (ಆ.10): ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸದಂತೆ ಪಿ.ಡಿ.ಎ ಮಷಿನ್‌ಗಳನ್ನು ವಾಪಸ್ ಪಡೆಯಲಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಕೆಲವರು ನಿಜ ಅಂತಿದ್ರೆ, ಇನ್ನೂ ಕೆಲವರು ಇದು ಸುಳ್ಳು ಎಂದು ಹೇಳುತ್ತಿದ್ದಾರೆ. 

ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದೆ. ಇದೀಗ ಇದಕ್ಕೆ ಸ್ವತಃ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಸ್ಪಷ್ಟನೆ ಕೊಟ್ಟಿದ್ದಾರೆ.

ಸಂಚಾರ ನಿಯಮ ಪಾಲಿಸುವರಿಗೆ ಕರ್ನಾಟಕದಲ್ಲಿ ಬಂಪರ್ ಆಫರ್; ಕಡಿಮೆ ವಿಮೆ ಹಾಗೂ ಬೋನಸ್ ಪ್ಲಾನ್!

ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸದಂತೆ ಪಿ.ಡಿ.ಎ ಮಷಿನ್‌ಗಳನ್ನು ಹಿರಿಯ ಅಧಿಕಾರಿಗಳು ವಾಪಸು ಪಡೆದಿದ್ದಾರೆ ಎಂಬುದು ಸುಳ್ಳು ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, "ಸಂಚಾರ ನಿಯಮಗಳನ್ನು ಜಾರಿಗೊಳಿಸಲು ಉಪಯೋಗಿಸುವ ಪಿ.ಡಿ.ಎ ಯಂತ್ರಗಳನ್ನು ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ಸಂಚಾರ ಪೊಲೀಸರಿಂದ ವಾಪಸು ಪಡೆದಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಯಾವುದೇ ಪ್ರಕರಣ ದಾಖಲಿಸದಂತೆ ಹಿರಿಯ ಅಧಿಕಾರಿಗಳು ಆದೇಶ ಮಾಡಿದ್ದಾರೆ ಎಂಬುದರ ಬಗ್ಗೆ ಹಲವು ಸುದ್ದಿ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ ಎಂದು ಸ್ಪಷ್ಟಡಿಸಿದ್ದಾರೆ.

traffic police joint commissioner ravikanthe-gowda Gives clarification about traffic fine rbj

ಆರಗ ಜ್ಞಾನೆಂದ್ರ ನೂತನ ಗೃಹ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಸಂಚಾರ ನಿಯಮ ಉಲ್ಲಂಘನೆ ಹೆಸರಿನಲ್ಲಿ ಸಂಚಾರ ಪೊಲೀಸರು ಮಾಡುತ್ತಿದ್ದ ಸುಲಿಗೆ ನಿಲ್ಲಿಸಿದ್ದಾರೆ. 

ಗೃಹ ಸಚಿವರ ಆದೇಶದ ಮೇರೆಗೆ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸುತ್ತಿಲ್ಲ. ದಂಡ ವಿಧಿಸುವ ಪಿಡಿಎ ಯಂತ್ರಗಳನ್ನು ಹಿರಿಯ ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಗಳು ವಾಪಸು ಪಡೆದಿದ್ದಾರೆ ಎಂದು ದೊಡ್ಡ ಸುದ್ದಿಯಾಗಿತ್ತು. 

ಅಲ್ಲದೇ ಗೃಹ ಸಚಿವ ಆರಗ ಜ್ಞಾನೆಂದ್ರ ಅವರು ಉತ್ತಮ ಕೆಲಸ ಮಾಡಿದ್ದಾರೆ ಅಂತೆಲ್ಲಾ  ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗಳಾಗಿದ್ದವು.

Follow Us:
Download App:
  • android
  • ios