ಎಎಪಿ ಸೇರಿ ಮನವರಿಕೆ ಆಗಿ ಬಿಜೆಪಿಗೆ ಬಂದಿದ್ದೀನಿ: ಭಾಸ್ಕರ್ ರಾವ್

ಬೆಂಗಳೂರು ನಗರದ ಮಾಜಿ ಪೊಲೀಸ್‌ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರು, ಎಎಪಿ ತೊರೆದು ಬಿಜೆಪಿ ಸೇರಿದ್ದಾರೆ.
 

First Published Mar 1, 2023, 3:49 PM IST | Last Updated Mar 1, 2023, 4:10 PM IST

ರಾಜಕೀಯಕ್ಕೆ ಬಂದಿದ್ದು ನೂತನ ಪಕ್ಷದ ಮೂಲಕ, ರಾಜಕೀಯದ ಬಗ್ಗೆ ಅರಿವೇ ಇಲ್ಲದ ಪಕ್ಷದಲ್ಲಿ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂದು ಭಾಸ್ಕರ್‌ ರಾವ್‌ ತಿಳಿಸಿದ್ದಾರೆ. ಒಂದು ಕಚೇರಿಯ ಹಾಗೆ ಪಕ್ಷವನ್ನು ನಡೆಸಿಕೊಂಡು ಹೋದ್ರೆ, ಕಾರ್ಯಕರ್ತರ ಧ್ವನಿ ಕೇಳದಿರುವುದು. ಒಂದು ಸಣ್ಣ ಗ್ರೂಪ್‌ ಮಾಡಿಕೊಂಡು ಹೋಗುವುದು ಹಾಗೂ ಪೊಲಿಟಿಕಲ್‌ ಮೆಚ್ಯೂರಿಟಿ ಇಲ್ಲದವರ ಜೊತೆ ಇಲ್ಲದಿರುವುದು ಸಾಧ್ಯವಿಲ್ಲ ಎಂದರು. ಆಮ್‌ ಆದ್ಮಿ ಪಾರ್ಟಿ ಸೇರಿ ಮನವರಿಕೆ ಆಗಿ ಬಿಜೆಪಿಗೆ ಬಂದಿದ್ದೀನಿ. ಜನತಾ ಪಾರ್ಟಿ ಪಕ್ಷದ ಹಿರಿಯ ನಾಯಕರು ಹೇಗೆ ಹೇಳುತ್ತಾರೊ ಹಾಗೆ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಹೇಳಿದ್ರು.