Asianet Suvarna News Asianet Suvarna News

ಆ್ಯಸಿಡ್ ಮಾರಾಟಕ್ಕೆ ಕಠಿಣ ನಿಯಮ ಬೇಕು: ಬೆಂಗಳೂರು ಆ್ಯಸಿಡ್‌ ದಾಳಿ ಸಂತ್ರಸ್ತೆ ಆಗ್ರಹ

Bengaluru acid attack case: ಆರೋಪಿಗೆ ನನ್ನ ಮುಂದೆ ಆ್ಯಸಿಡ್ ಹಾಕಿ ನೇಣಿಗೆ ಹಾಕಬೇಕು ಎಂದಿರುವ ಯುವತಿ ಘಟನೆ ಬಗ್ಗೆ ವಿವಿರಿಸಿದ್ದಾರೆ

Aug 12, 2022, 8:09 PM IST

ಬೆಂಗಳೂರು (ಆ. 12): ಪ್ರೇಮ ನಿರಾಕರಿಸಿದ ಕಾರಣಕ್ಕೆ ಮಾಗಡಿ ರಸ್ತೆಯ ಸುಂಕದಟ್ಟೆಯಲ್ಲಿ ಕಳೆದ ಏಪ್ರಿಲ್‌ನಲ್ಲಿ 24 ವರ್ಷದ ಯುವತಿ ಮೇಲೆ ನಡೆದಿದ್ದ ಆ್ಯಸಿಡ್‌ ದಾಳಿ ನಡೆದಿತ್ತು. ಈ ಸಂಬಂಧ  ಪ್ರಕರಣದ ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪ ಪಟ್ಟಿಸಲ್ಲಿಸಿದ್ದಾರೆ.  ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ಥ ಯುವತಿ ಈಗ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಮಾತನಾಡಿದ್ದಾರೆ. 

ಆರೋಪಿಗೆ ನನ್ನ ಮುಂದೆ ಆ್ಯಸಿಡ್ ಹಾಕಿ ನೇಣಿಗೆ ಹಾಕಬೇಕು ಎಂದಿರುವ ಯುವತಿ ಘಟನೆ ಬಗ್ಗೆ ವಿವಿರಿಸಿದ್ದಾರೆ. "ಈಗ ಸ್ವಲ್ಪ ಪರವಾಗಿಲ್ಲ ಅರೋಗ್ಯ, ಇನ್ನೂ ಪೇನ್ ಹಾಗೇ ಇದೆ. ಏಪ್ರಿಲ್ 28 ರಂದು ನಮ್ಮ ಅಪ್ಪ 8.30 ಕ್ಕೆ ಆಫೀಸ್ ಗೆ ಬಿಟ್ರು, ಇನ್ನೂ ಆಫೀಸ್ ಓಪನ್ ಅಗಿರಲಿಲ್ಲ. ನಾನು ಅಫೀಸ್ ಸ್ಟೆಪ್ಸ್ ಹತ್ತುಕೊಂಡು ಹೋಗ್ತಾ ಇದ್ದೆ.  ಈ ಸಂದರ್ಭದಲ್ಲಿ ಹಿಂದೆಯಿಂದ ಯಾರೋ ಕರೆದ ಹಾಗೇ ಆಯ್ತು. ಅಗ ಅವನು ನಿನ್ನ ಮೇಲೆ ಆ್ಯಸಿಡ್ ಹಾಕ್ತೀನಿ ಎಂದು ಹೇಳ್ದ. ನನಗೆ ಆ ಟೈಮಲ್ಲಿ  ತುಂಬಾ ಭಯ ಆಯ್ತು. ನಂತರ ನನ್ನ ತಲೆ ಜುಟ್ಟು ಹಿಡಕೊಂಡು ಆ್ಯಸಿಡ್ ಹಾಕಿದ್ದಾನೆ" ಎಂದು ಯುವತಿ ತಿಳಿಸಿದ್ದಾರೆ. 

ಬೆಂಗಳೂರು: ಸುಂಕದಕಟ್ಟೆ ಆ್ಯಸಿಡ್‌ ದಾಳಿಗೆ ಫೋನ್‌ ರೆಕಾರ್ಡ್‌ ಧ್ವನಿ ಸಾಕ್ಷಿ..!

ಸರ್ಕಾರ ಆ್ಯಸಿಡ್ ಸಿಗದೇ ಇರೋ ಹಾಗೇ ನೋಡಕೋಬೇಕು ಆಗ್ರಹಿಸಿರುವ  ಯುವತಿ "ಆ್ಯಸಿಡ್ ಮಾರಾಟ ಮಾಡೋದ್ ಬಗ್ಗೆ ಕಠಿಣ ರೂಲ್ಸ್ ತರಬೇಕು.  ಅವನಿಗೆ ಕಠಿಣ ಶಿಕ್ಷೆಯಾಗಬೇಕು ಮುಂದೆ ಈ ರೀತಿ ಯಾರು ಮಾಡಬಾರದು.  ಆಸ್ಪತ್ರೆಯಲ್ಲಿ ಇರುವಾಗ ಎಲ್ಲರೂ ತುಂಬಾ ಸಪೋರ್ಟ್ ಮಾಡಿದ್ದಾರೆ.  ವೈದ್ಯರು ಪೊಲೀಸರು ಸಾಕಷ್ಟು ಸಹಕಾರ ನೀಡಿದ್ದಾರೆ. ಪೊಲೀಸರು ರಕ್ತವನ್ನು ನೀಡಿದ್ದಾರೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ" ಎಂದಿದ್ದಾರೆ

Video Top Stories