ಉಪ ತಹಶೀಲ್ದಾರನ ಮೀಟರ್‌ ಬಡ್ಡಿ ದರ್ಬಾರ್‌, ಆಡಿಯೋ ವೈರಲ್‌ ಆದ್ರೂ ಸುಮ್ಮನೆ ಇದ್ಯಲ್ಲ ಸರ್ಕಾರ

ಬೇಲೂರು ಡೆಪ್ಯುಟಿ ತಹಶೀಲ್ದಾರ್‌ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ, ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವಕನ ತಾಯಿ ಡೆಪ್ಯುಟಿ ತಹಶೀಲ್ದಾರ್‌ ವಿರುದ್ಧ ಆರೋಪ ಮಾಡಿದ್ದಾರೆ.

First Published Jan 7, 2025, 4:46 PM IST | Last Updated Jan 7, 2025, 4:46 PM IST

ಬೇಲೂರು (ಜ.7): ಈತ ಸರ್ಕಾರ ಅಧಿಕಾರಿ, ಮಾಡೋದು ಬಡ್ಡಿ ವ್ಯವಹಾರ. ಮಾಡೋದು ಅಂತಿಂಥ ಬಡ್ಡಿ ವ್ಯವಹಾರವಲ್ಲ. ಇವನತ್ರ ಹಣ ತೆಗೆದುಕೊಂಡ್ರೆ ಸಾವೇ ಗತಿ ಅನ್ನೋವಷ್ಟರ ಮಟ್ಟಿಗೆ ಮೀಟರ್‌ ಬಡ್ಡಿ ದಂಧೆ ಮಾಡುವ ಕ್ರಿಮಿ.

ಮೀಟರ್‌ ಬಡ್ಡಿ ದಂಧೆ ಮಾಡುತ್ತಿದ್ದಾರೆ ಎಂದು ಬೇಲೂರು ಡೆಪ್ಯುಟಿ ತಹಶೀಲ್ದಾರ್‌ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು,  ಈತ ನೀಡುತ್ತಿದ್ದ ಟಾರ್ಚರ್‌ಗೆ ಜಯರಾಜ್‌ ಎನ್ನುವ ಯುವಕ ಸಾವು ಕಂಡಿದ್ದಾನೆ.

Shivamogga: ಬೆಂಗಳೂರು ಬಳಿಕ ಶಿವಮೊಗ್ಗದಲ್ಲೂ HMP ವೈರಸ್‌ ಪತ್ತೆ, ಮೂವರು ಮಕ್ಕಳಲ್ಲಿ ಸೋಂಕು

ಪ್ರದೀಪ್‌ ಬಡ್ಡಿ ಕಿರುಕುಳಕ್ಕೆ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಜಯರಾಜ್‌ ತಾಯಿ ಹೇಳಿದ್ದಾರೆ. ಡೆಪ್ಯುಟಿ ತಹಶೀಲ್ದಾರ್‌ ವಿರುದ್ಧ ಜಯರಾಜ್‌ ಅವರ ತಾಯಿ ಕಲ್ಪನಾ ಈ ಆರೋಪ ಮಾಡಿದ್ದಾರೆ.