ಲಾಕ್‌ಡೌನ್ ಹೆಸರಲ್ಲಿ ವಸೂಲಿಗಿಳಿದ್ರಾ ಪೊಲೀಸರು..?
ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಇಂದಿನಿಂದ ಬೆಳಗಾವಿ ಜಿಲ್ಲೆಯಾದ್ಯಂತ ಲಾಕ್‌ಡೌನ್ ಜಾರಿಗೆ ಬಂದಿದೆ. ವಾಹನ ತಪಾಸಣೆ ನಡೆಸುವ ವೇಳೆ ಪೇದೆಯೊಬ್ಬ ಹುಟ್ಟಾಟ ನಡೆಸಿದ್ದಾನೆ.
ಬೆಳಗಾವಿ(ಜು.15): ಲಾಕ್‌ಡೌನ್ ಹೆಸರಿನಲ್ಲಿ ಪೊಲೀಸರು ವಸೂಲಿಗಿಳಿದ್ರಾ ಎನ್ನುವ ಅನುಮಾನ ಶುರುವಾಗಿದೆ. ಯಾಕೆಂದರೆ ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಬಂದ ವ್ಯಕ್ತಿಯಿಂದ ಮಾಸ್ಕ್ ಯಾಕೆ ಹಾಕಿಲ್ಲ ಎಂದು ಪೊಲೀಸ್ ಪೇದೆಯೊಬ್ಬ ಹಣ ವಸೂಲು ಮಾಡಿದ್ದಾನೆ.
ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಇಂದಿನಿಂದ ಬೆಳಗಾವಿ ಜಿಲ್ಲೆಯಾದ್ಯಂತ ಲಾಕ್‌ಡೌನ್ ಜಾರಿಗೆ ಬಂದಿದೆ. ವಾಹನ ತಪಾಸಣೆ ನಡೆಸುವ ವೇಳೆ ಪೇದೆಯೊಬ್ಬ ಹುಟ್ಟಾಟ ನಡೆಸಿದ್ದಾನೆ.
ಜಗತ್ತಿನ ಭವಿಷ್ಯವನ್ನು ಯುವ ಜನಾಂಗ ನಿರ್ಧರಿಸಲಿದೆ: ಪಿಎಂ ಮೋದಿ
ಇದೆಲ್ಲಾ ನಡೆದದ್ದು ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ಯಾ ನಾಚಿಕೆ ಆಗಲ್ವಾ ನಿಂಗೆ? ಮಾಸ್ಕ್ ಹಾಕದಿದ್ರೆ 500 ರುಪಾಯಿ ದಂಡ ಐತಿ, ಕೋರ್ಟ್‌ಗೆ ಹೋಗಿ ದಂಡಕಟ್ಟು ಎಂದು ಪೇದೆ ಆವಾಜ್ ಹಾಕಿದ್ದಾನೆ. ಆ ಬಳಿಕ ವ್ಯಕ್ತಿ ನೀಡಿದ ಹಣವನ್ನು ಜೇಬಿಗಿಳಿಸಿದ್ದಾನೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.