ಜಗತ್ತಿನ ಭವಿಷ್ಯವನ್ನು ಯುವ ಜನಾಂಗ ನಿರ್ಧರಿಸಲಿದೆ: ಪಿಎಂ ಮೋದಿ

ಭಾರತ ಸೇರಿದಂತೆ ಇಡೀ ವಿಶ್ವ ಯುವ ಜನಾಂಗದ ಕೌಶಲ್ಯದ ಜ್ಞಾನದ ತಳಹದಿಯ ಮೇಲೆ ನಿಂತಿದೆ| ಜಗತ್ತಿನ ಭವಿಷ್ಯವನ್ನು ಇದೇ ಯುವ ಜನಾಂಗ ನಿರ್ಧರಿಸಲಿದೆ| ವಿಶ್ವ ಯುವ ಕೌಶಲ್ಯ ದಿನಾಚರಣೆ ಪ್ರಯುಕ್ತ ಪ್ರಧಾನಿ ಮೋದಿ ಮಾತು

First Published Jul 15, 2020, 1:47 PM IST | Last Updated Jul 15, 2020, 1:47 PM IST

ನವದೆಹಲಿ(ಜು.15): ಭಾರತವೂ ಸೇರಿದಂತೆ ಇಡೀ ವಿಶ್ವ ಯುವ ಜನಾಂಗದ ಕೌಶಲ್ಯದ ಜ್ಞಾನದ ತಳಹದಿಯ ಮೇಲೆ ನಿಂತಿದ್ದು, ಜಗತ್ತಿನ ಭವಿಷ್ಯವನ್ನು ಇದೇ ಯುವ ಜನಾಂಗ ನಿರ್ಧರಿಸಲಿದೆ ಎಂದು ಪಿಎಂ ಮೋದಿ ಹೇಳಿದ್ದಾರೆ.

ವಿಶ್ವ ಯುವ ಕೌಶಲ್ಯ ದಿನಾಚರಣೆ ಅಂಗವಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಯುವ ಜನತೆಗೆ ವಿಶ್ವ ಯುವ ಕೌಶಲ್ಯ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ.

ಯುವಕರಲ್ಲಿ ಕೌಶಲ್ಯ ಅಭಿವೃದ್ಧಿಪಡಿಸಲು ಸ್ಕಿಲ್ ಇಂಡಿಯಾ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಉದ್ಯಮ ವಲಯಕ್ಕೆ ಅಗತ್ಯವಾಗಿರುವ ಕೌಶಲ್ಯಗಳನ್ನು ಉದ್ಯೋಗಿಗಳನ್ನು ಬೆಳೆಸುವುದು; ನೌಕರರ ಕಾರ್ಯಕ್ಷಮತೆ ಹೆಚ್ಚಿಸಲು ಪೂರಕವಾಗಿ ಕೌಶಲ್ಯಗಳನ್ನ ಅಭಿವೃದ್ಧಿಪಡಿಸುದು ಈ ಯೋಜನೆ ಉದ್ದೇಶ. ಇಲ್ಲಿದೆ ಪಿಎಂ ಮೋದಿ ಸಂಪೂರ್ಣ ಭಾಷಣ