ಬೆಳಗಾವಿ: ಚಳ್ಳೆಹಣ್ಣು ತಿನ್ನಿಸುತ್ತಿರುವ ಚಾಲಾಕಿ ಚಿರತೆ, 23ನೇ ದಿನಕ್ಕೆ ಕಾಲಿಟ್ಟ ಶೋಧ ಕಾರ್ಯಾಚರಣೆ

ಬೆಳಗಾವಿ ಇಲ್ಲಿನ ಗಾಲ್ಫ್ ಕೋರ್ಸ್‌ ಮೈದಾನಕ್ಕೆ ನುಸುಳಿರುವ ಚಿರತೆ 23 ದಿನ ಕಳೆದರೂ ಪತ್ತೆಯಾಗಿಲ್ಲ. ಶುಕ್ರವಾರ ನಡೆಸಿದ ಗಜಪಡೆಯ ಕಾರ್ಯಾಚರಣೆ ಸಂಜೆಗೆ ಮುಕ್ತಾಯಗೊಂಡಿದ್ದು, ಇದು ಯಾವುದೇ ಫಲ ಕೂಡ ನೀಡಿಲ್ಲ.

First Published Aug 27, 2022, 12:36 PM IST | Last Updated Aug 27, 2022, 12:36 PM IST

ಬೆಳಗಾವಿ (ಆ.27): ಇಲ್ಲಿನ ಗಾಲ್ಫ್ ಕೋರ್ಸ್‌ ಮೈದಾನಕ್ಕೆ ನುಸುಳಿರುವ ಚಿರತೆ 23 ದಿನ ಕಳೆದರೂ ಪತ್ತೆಯಾಗಿಲ್ಲ. ಗಜಪಡೆಯ ಕಾರ್ಯಾಚರಣೆ ಯಾವುದೇ ಫಲ ಕೂಡ ನೀಡಿಲ್ಲ. ಹೀಗಾಗಿ ಈಗ ಮತ್ತೊಂದು ಅಸ್ತ್ರವನ್ನು ಬಳಸಿಕೊಂಡಿರುವ ಅರಣ್ಯ ಇಲಾಖೆ, ಚಿರತೆ ಸೆರೆಗೆ ಆಪರೇಷನ್‌ ಹನಿಟ್ರ್ಯಾಪ್‌ಗೆ ಮೊರೆ ಹೋಗಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಚಿರತೆಯನ್ನು ನೋಡಿದರೆ ಅದು ಗಂಡು ಚಿರತೆ ಎಂಬ ನಿರ್ಧಾರಕ್ಕೆ ಅರಣ್ಯ ಇಲಾಖೆ ಬಂದಿದೆ. ಹಾಗಾಗಿ ಚಿರತೆ ಸೆರೆಗೆ ಇಡಲಾಗಿರುವ 9 ಬೋನ್‌ಗಳಲ್ಲಿ ಹೆಣ್ಣು ಚಿರತೆಯ ಮೂತ್ರವನ್ನು ತಂದು ಸಿಂಪಡಿಸಲಾಗಿದೆ. ಭೂತರಾಮನಹಟ್ಟಿಕಿರು ಮೃಗಾಲಯದಲ್ಲಿನ ಎರಡು ಹೆಣ್ಣು ಚಿರತೆಗಳ ಮೂತ್ರವನ್ನು ತರಲಾಗಿದೆ ಎಂದು ಎಸಿಎಫ್‌ ಮಲ್ಲಿನಾಥ ಕುಸ್ನಾಳ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಚಿರತೆ ಸೆರೆಗೆ ನಿತ್ಯ 2.5 ಲಕ್ಷ ವೆಚ್ಚ!
ಚಿರತೆ ಶೋಧಕ್ಕೆ ಈವರೆಗೂ ಅರಣ್ಯ ಇಲಾಖೆಯಿಂದ ಒಟ್ಟು ಅಂದಾಜು .40 ಲಕ್ಷ ವೆಚ್ಚ ಮಾಡಲಾಗಿದೆ. ಇದೀಗ ಇಲಾಖೆಯ ಬಳಿ ಇರುವ ವಿಶೇಷ ಅನುದಾನ ಬಳಕೆ ಮಾಡಲಾಗುತ್ತಿದೆ. ನಿತ್ಯ ಅಂದಾಜು .2.50 ಲಕ್ಷ ವೆಚ್ಚವನ್ನು ಅರಣ್ಯ ಇಲಾಖೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಶಿವಮೊಗ್ಗದ ಸಕ್ರೆಬೈಲ್‌ ಬಿಡಾರದಿಂದ ಬಂದಿರುವ ಗಜಪಡೆ, ನೂರಾರು ಸಿಬ್ಬಂದಿ ಊಟ, ವಸತಿ ವ್ಯವಸ್ಥೆಗೆ ನಿತ್ಯ ಲಕ್ಷ ಲಕ್ಷ ರು. ವೆಚ್ಚವಾಗುತ್ತಿದೆ.

Video Top Stories